25ನೇ ಬೆಂಗಳೂರು ಟೆಕ್‌ ಸಮಿಟ್:‌ ವರ್ಚುವಲ್‌ ಮೂಲಕ ಪ್ರಧಾನಿ ಮೋದಿ ಚಾಲನೆ!

masthmagaa.com:

ಇಂದಿನಿಂದ 3 ದಿನಗಳ ಕಾಲ ಬೆಂಗಳೂರು ಅರಮನೆ ಮೈದಾನದಲ್ಲಿ ಟೆಕ್‌ ಸಮಿಟ್‌ ನಡೆಯಲಿದೆ. 25ನೇ ವರ್ಷದ ಬೆಂಗಳೂರು ಟೆಕ್‌ ಸಮಿಟ್‌ಗೆ ವರ್ಚುವಲ್​ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಈ ಮಹತ್ವದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಐಟಿ-ಬಿಟಿ ಇಲಾಖೆ ಸಚಿವ ಅಶ್ವಥ್ ನಾರಾಯಣ ಸೇರಿದಂತೆ 31 ದೇಶಗಳ ಸಚಿವರು ಭಾಗಿಯಾಗಿದ್ದಾರೆ. ಇನ್ನು ಟೆಕ್ ಸಮಿಟ್ ಚಾಲನೆ ಬಳಿಕ ಮಾತನಾಡಿದ ಮೋದಿ, ಬೆಂಗಳೂರು ತಂತ್ರಜ್ಞಾನದ ತವರು. ಭಾರತದ ಆವಿಷ್ಕಾರ ವಲಯದಲ್ಲಿ ಬೆಂಗಳೂರು ನಂಬರ್​ ಒನ್ ಆಗಿದೆ. ಭಾರತ ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟ್ ಅಪ್​ ಕೇಂದ್ರ ಅಂತ ಹೇಳಿದ್ದಾರೆ. ಇತ್ತ ಸಮಿಟ್‌ ಉದ್ಘಾಟಿಸಿ ಮಾತಾಡಿ ಸಿಎಂ ಬಸವರಾಜ ಬೊಮ್ಮಾಯಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ, ಅಭಿವೃದ್ದಿ ಮತ್ತು ಆವಿಷ್ಕಾರ ಪ್ರೋತ್ಸಾಹಿಸೋಕೆ ಬೆಂಗಳೂರಿನಲ್ಲಿ ನವೋದ್ಯಮ ಪಾರ್ಕ್‌ ಸ್ಥಾಪಿಸೋದಾಗಿ ಅನೌನ್ಸ್‌ ಮಾಡಿದ್ದಾರೆ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲೇ 6 ತಿಂಗಳ ಒಳಗೆ ನವೋದ್ಯಮ ಪಾರ್ಕ್‌ ಸ್ಥಾಪನೆಗೆ ಚಾಲನೆ ನೀಡಲಾಗುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply