ನೆಹರು ಮೊದಲ ಸ್ವಾತಂತ್ರ್ಯ ಭಾಷಣದಿಂದ ಹಣದುಬ್ಬರವಂತೆ!

masthmagaa.com:

ದೇಶದಲ್ಲಿರೋ ಹಣದುಬ್ಬಕ್ಕೆ ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಕಾರಣ ಅಂತ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ಬೆಲೆಯೇರಿಕೆ ಖಂಡಿಸಿ ವಿಪಕ್ಷಗಳ ಪ್ರತಿಭಟನೆ ಕುರಿತು ಮಾತನಾಡಿದ ಮಧ್ಯಪ್ರದೇಶದ ಸಚಿವ ವಿಶ್ವಾಸ್ ಸಾರಂಗ್​​​, ಇದು ಒಂದೆರಡು ದಿನಗಳ ಸಮಸ್ಯೆ ಅಲ್ಲ.. ದೇಶದ ಆರ್ಥಿಕತೆಯ ಪತನ 1947ರ ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ಜವಾಹರ್​ ಲಾಲ್ ನೆಹರು ಭಾಷಣ ಮಾಡಿದ್ರಲ್ವಾ ಅವತ್ತೇ ಶುರುವಾಯ್ತು ಅಂತ ಹೇಳಿದ್ದಾರೆ. ಅದೇ ಕೇಂದ್ರದಲ್ಲಿ ಪ್ರಧಾನಿ ಮೋದಿ ಸರ್ಕಾರ ಬಂದ ಬಳಿಕ ಆರ್ಥಿಕತೆ ಬಲಿಷ್ಠವಾಗಿದೆ. ಹಣದುಬ್ಬರ ಕಡಿಮೆಯಾಗಿದೆ. ಜನರ ಆದಾಯ ಜಾಸ್ತಿಯಾಗಿದೆ. ಕಾಂಗ್ರೆಸ್ಸಿಗರು ಸೋನಿಯಾ ಗಾಂಧಿ ಮನೆ ಮುಂದೆ ಹೋಗಿ ಪ್ರೊಟೆಸ್ಟ್​ ಮಾಡ್ಬೇಕು ಅಂತ ಹೇಳಿದ್ದಾರೆ. ಅಂದಹಾಗೆ ಇವತ್ತು ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 105 ರೂಪಾಯಿ ಆಗಿದೆ. ಇನ್ನು ಡೀಸೆಲ್ ಬೆಲೆ ಪ್ರತಿ ಲೀಟರ್​​​ಗೆ 95 ರೂಪಾಯಿಯಷ್ಟಿದೆ.

-masthmagaa.com

Contact Us for Advertisement

Leave a Reply