ಪಠಾಣ್ ಕೋಟ್ ದಾಳಿ ಮಾದರಿಯಲ್ಲಿ ದಾಳಿಗೆ ಸ್ಕೆಚ್​​..!

ಜಮ್ಮು ಕಾಶ್ಮೀರದಲ್ಲಿ 370 ವಿಧಿಯನ್ವಯ ನೀಡಲಾದ ವಿಶೇಷ ಸವಲತ್ತುಗಳನ್ನು ನಿಷೇಧಿಸಿದ ಬಳಿಕ ಭಾರತದಲ್ಲಿ ದಾಳಿ ನಡೆಸಲು ಉಗ್ರರು ಕಾದು ಕುಳಿತಿದ್ದಾರೆ. ಪಂಜಾಬ್ ಮತ್ತು ಅದರ ಸುತ್ತಮುತ್ತಲಿನ ಕ್ಷೇತ್ರಗಳಲ್ಲಿ ಭಾರಿ ಪ್ರಮಾಣದಲ್ಲಿ ಉಗ್ರರು ನುಸುಳಿದ್ದು, ಪಠಾನ್ ಕೋಟ್ ಮಾದರಿಯಲ್ಲಿ ದಾಳಿಗೆ ಸಂಚು ರೂಪಿಸ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಅಲ್ಲದೆ ಉಗ್ರರು ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಪ್ಲಾನ್ ಮಾಡ್ತಿದ್ಧಾರೆ. ಹೀಗಾಗಿ ಸ್ವಲ್ಪ ಎಚ್ಚರವಾಗಿರಿ ಎಂದು ಸೇನೆಗೆ ಸೂಚಿಸಲಾಗಿದೆ. ಪಠಾಣ್ ಕೋಟ್ ಜೊತೆಗೆ ಜಮ್ಮು, ಶ್ರೀನಗರ ಸೇರಿದಂತೆ ಹಲವೆಡೆ ಹೈ ಅಲರ್ಟ್​ ಘೋಷಿಸಲಾಗಿದೆ.

ಇಂದು ಬೆಳಗ್ಗೆಯಷ್ಟೇ ಜಮ್ಮು ಕಾಶ್ಮೀರದ ಅನಂತ್ ನಾಗ್​ನಲ್ಲಿ ಮೂವರು ಉಗ್ರರನ್ನು ಯೋಧರು ಹೊಡೆದುರುಳಿಸಿದ್ದರು.

Contact Us for Advertisement

Leave a Reply