ಚೀನಾದಲ್ಲಿ 27 ವರ್ಷಗಳಲ್ಲೇ ದಾಖಲೆ ಕುಸಿತ ಕಂಡ ಜಿಡಿಪಿ..!

ಬೀಜಿಂಗ್​: ಭಾರತದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಕಳೆದ ಏಳೆಂಟು ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಈ ಸ್ಥಿತಿ ಬಂದಿದೆ ಎಂದು ವಿಪಕ್ಷಗಳು ಕೂಗಾಡ್ತಿವೆ. ಆದ್ರೆ ಚೀನಾ ಜಿಡಿಪಿ ದರ ಕೂಡ ಭಾರಿ ಚೆನ್ನಾಗಿಲ್ಲ. ಅವರ ಜಿಡಿಪಿ ದರ ಕಳೆದ 27 ವರ್ಷಗಳಲ್ಲೇ ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ಕುಸಿದಿದೆ. ಚೀನಾ ಜಿಡಿಪಿ ಪ್ರಮಾಣ ಈ ತೃತೀಯ ತ್ರೈಮಾಸಿಕದಲ್ಲಿ ಶೇ.6ಕ್ಕೆ ಇಳಿದಿದೆ. 2ನೇ ತ್ರೈಮಾಸಿಕದಲ್ಲಿ ಶೇ.6.2ರಷ್ಟು ಜಿಡಿಪಿ ದರ ದಾಖಲಾಗಿತ್ತು. ಇನ್ನು ವಾರ್ಷಿಕವಾಗಿ ಈ ಬಾರಿ ಸುಮಾರು ಶೇ. 6ರಿಂದ 6.5ರವರೆಗೆ ತಲುಪಬಹುದು ಎಂದು ಮೂಲಗಳು ತಿಳಿಸಿವೆ. 2018ರಲ್ಲಿ ಚೀನಾ ಶೇ.6.6ರಷ್ಟು ಜಿಡಿಪಿ ದಾಖಲಿಸಿತ್ತು. ಅಮೆರಿಕಾದೊಂದಿಗೆ ವ್ಯಾಪಾರ ಸಂಬಂಧ ನಡೆಯುತ್ತಿರುವ ಶೀಥಲ ಸಮರವೇ ಚೀನಾದ ಜಿಡಿಪಿ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಈ ಹಿಂದೆ ಚೀನಾದಲ್ಲಿ 1992ರಲ್ಲಿ ಈ ಪ್ರಮಾಣದಲ್ಲಿ ಜಿಡಿಪಿ ಕುಸಿತ ಕಂಡಿತ್ತು.

 

Contact Us for Advertisement

Leave a Reply