`ಚಾರ್ಲಿ 777′ ಸಿನಿಮಾಗೆ ಅಂತರಾಷ್ಟೀಯ ಮನ್ನಣೆ!

masthmagaa.com:

ಚಾರ್ಲಿ 777 ಸಿನಿಮಾ ಸ್ಯಾಂಡಲ್‌ ವುಡ್‌ನಲ್ಲಿ ಹೊಸ ಸೆನ್ಸೆಶನ್‌ ಸೃಷ್ಟಿಮಾಡಿತು. ಚಾರ್ಲಿ ಡಾಗ್‌ ನಟನೆಯಲ್ಲಿ ಮನುಷ್ಯರನ್ನೇ ಮೀರಿಸಿಬಿಟ್ಟಿತು. ಹೊಸ ಪ್ರಯತ್ನದಿಂದ ಸಿನಿಮಾ ಸಾಕಷ್ಟು ಯಶಸ್ಸು ಗಳಿಸಿತು. ಇದೀಗ ಚಾರ್ಲಿ 777 ಸಿನಿಮಾ ಜಾಗತಿಕ ಮಟ್ಟದಲ್ಲಿ ಕೀರ್ತಿ ಸಂಪಾದಿಸಿದೆ. ಚಾರ್ಲಿ 777 ಸಿನಿಮಾ ʻಲಿಫ್ಟ್‌ ಆಫ್‌ ಗ್ಲೋಬಲ್‌ ನೆಟ್‌ವರ್ಕ್‌ – ಫಸ್ಟ್‌ ಟೈಮ್‌ ಸೆಶನ್ಸ್‌ ಫೀಲಂ ಮೇಕರ್‌ 2023 ಅವಾರ್ಡ್‌ʼ ನ್ನು ಗೆದ್ದುಕೊಂಡಿದೆ ಹಾಗೂ ನ್ಯೂ ಯಾರ್ಕ್‌ ಇಂಟರ್‌ನ್ಯಾಷನಲ್‌ ಫಿಲಂ ಅವಾರ್ಡ್‌ನ (NYIFA20) ಪೈನಲಿಸ್ಟ್‌ ಸ್ಥಾನದಲ್ಲಿದೆ. ಈ ಬಗ್ಗೆ ಚಿತ್ರತಂಡ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿಕೊಂಡಿದೆ. ಇದಕ್ಕೆ ಫ್ಯಾನ್ಸ್‌ ಕಾಮೆಂಟ್‌ ಮಾಡಿ ಚಾರ್ಲಿ 777 ಇದೊಂದು ಬೆಸ್ಟ್‌ ಸಿನಿಮಾ, ಸಾಕಷ್ಟು ನ್ಯಾಷನಲ್‌ ಅವಾರ್ಡ್ಸ್‌ ಸಿನಿಮಾಕ್ಕೆ ಸಿಗಲಿ ಎಂದು ಶುಭಹಾರೈಸಿದ್ದಾರೆ.

-masthmagaa.com

 

Contact Us for Advertisement

Leave a Reply