ಇಂಟರ್​​ಪೋಲ್​​​ ಅಧ್ಯಕ್ಷರಾದ ಯುಎಇ ಸೇನಾ ಜನರಲ್!

masthmagaa.com:

ಯುನೈಟೆಡ್ ಅರಬ್ ಎಮಿರೇಟ್ಸ್​​ನ ಜನರಲ್ ಅಹ್ಮದ್ ನಾಸರ್ ಅಲ್ ರೈಸಿ ಇಂಟರ್​ಪೋಲ್​​ನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಇವರು ಯುಎಇ ಸೇನೆಯ ಮುಖ್ಯಸ್ಥರಾಗಿದ್ದಾರೆ. ಇನ್ನು ಮುಂದಿನ 4 ವರ್ಷದವರೆಗೆ ಇವರೇ ಇಂಟರ್​ಪೋಲ್​ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ. ಕೆಲ ತಿಂಗಳ ಹಿಂದೆ ಫ್ರಾನ್ಸ್ ಮತ್ತು ಟರ್ಕಿಯಲ್ಲಿ ಇವರ ವಿರುದ್ಧ ಟಾರ್ಚರ್ ಕೊಟ್ಟ ಆರೋಪ ಕೇಳಿ ಬಂದಿತ್ತು. ಯುಎಇ ರಾಜಕೀಯ ಭಿನ್ನಮತೀಯರನ್ನು ಹಿಂಸಿಸಲು ಇಂಟರ್​ಪೋಲ್​​ನ ರೆಡ್​ ನೋಟಿಸ್ ಬಳಸಿಕೊಂಡಿದೆ ಅನ್ನೋ ಆರೋಪ ಕೇಳಿ ಬಂದಿತ್ತು. ಯೂರೋಪಿಯನ್ ಪಾರ್ಲಿಮೆಂಟ್​​ನ ಮೂವರು ಸದಸ್ಯರು ನವೆಂಬರ್ 11ರಂದು ಯೂರೋಪಿಯನ್ ಕಮಿಷನ್ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ಇಂಟರ್​​​​ಪೋ್ಲ ಅಧ್ಯಕ್ಷರಾಗಿ ಜನರಲ್ ಅಹ್ಮದ್ ನಾಸರ್ ಅಲ್​​​ ರೈಸಿ ನೇಮಕದಿಂದ ಆಗೋ ಪರಿಣಾಮದ ಬಗ್ಗೆ ಎಚ್ಚರಿಸಿದ್ದಾರೆ. ಜೊತೆಗೆ ರೈಸಿಯ ಆಯ್ಕೆಯಿಂದ ಇಂಟರ್​ಪೋಲ್​​ನ ಖ್ಯಾತಿಗೆ ಧಕ್ಕೆಯಾಗಲಿದ್ದು, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸೋ ಸಾಮರ್ಥ್ಯದ ಮೇಲೆ ಧಕ್ಕೆಯಾಗಲಿದೆ ಅಂತ ಹೇಳಿದ್ದಾರೆ.

-masthmagaa.com

 

Contact Us for Advertisement

Leave a Reply