masthmagaa.com:

14ನೇ ಆವೃತ್ತಿಯ ಅಂದ್ರೆ ಈ ಬಾರಿಯ ಐಪಿಎಲ್​ ವೇಳಾಪಟ್ಟಿ ಪ್ರಕಟವಾಗಿದೆ. ಏಪ್ರಿಲ್​ 9ರಂದು ಚೆನ್ನೈನಲ್ಲಿ ಮೊದಲ ಪಂದ್ಯ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಜಗತ್ತಿನ ಅತಿದೊಡ್ಡ ಕ್ರಿಕೆಟ್​ ಸ್ಟೇಡಿಯಂ ಆಗಿರೋ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೇ 30ಕ್ಕೆ ಫೈನಲ್​ ಮ್ಯಾಚ್​ ನಡೆಯಲಿದೆ. ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ ಪಂದ್ಯ ಕೂಡ ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ನಡೆಯಲಿದೆ. ಉಳಿದಂತೆ ದೆಹಲಿ, ಅಹಮದಾಬಾದ್, ಬೆಂಗಳೂರು, ಕೋಲ್ಕತ್ತಾ, ಚೆನ್ನೈ ಮತ್ತು ಮುಂಬೈ – ಈ 6 ನಗರಗಳಲ್ಲಿ ಒಟ್ಟು 56 ಗ್ರೂಪ್​ ಪಂದ್ಯಗಳು ನಡೆಯಲಿವೆ.

-masthmagaa.com

Contact Us for Advertisement

Leave a Reply