ಇರಾನ್​​ನಲ್ಲಿ ಅಧ್ಯಕ್ಷೀಯ ಚುನಾವಣೆ.. ಹೇಗೆ ನಡೆಯುತ್ತೆ ಚುನಾವಣೆ..?

masthmagaa.com:

ಇರಾನ್​​ನಲ್ಲಿ ಇವತ್ತು ಮುಂದಿನ ಅಧ್ಯಕ್ಷರ ಆಯ್ಕೆಗಾಗಿ ಮತದಾನ ನಡೀತಾ ಇದೆ. ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಮೊದಲು ಮತ ಹಾಕಿ, ಮತದಾನಕ್ಕೆ ಚಾಲನೆ ನೀಡಿದ್ರು. ಇರಾನ್​ನಲ್ಲಿ 8 ಕೋಟಿಗೂ ಅಧಿಕ ಜನಸಂಖ್ಯೆ ಇದ್ದು, ಅದ್ರಲ್ಲಿ 5.9 ಕೋಟಿ ಜನ ಮತದಾನದ ಅಧಿಕಾರ ಹೊಂದಿದ್ದಾರೆ. ಆದ್ರೆ ಈ ಸಲ ಬರೀ 42 ಪರ್ಸೆಂಟ್ ಮಾತ್ರವೇ ಮತದಾನ ನಡೆಯಲಿದೆ ಅಂತ ಸರ್ಕಾರದ ಇರಾನಿಯನ್ ಸ್ಟೂಡೆಂಟ್ ಪೋಲಿಂಗ್ ಏಜೆನ್ಸಿ ಅಂದಾಜಿಸಿದೆ. ಇದು 1979ರ ಇಸ್ಲಾಮಿಕ್ ಕ್ರಾಂತಿ ಬಳಿಕ ತುಂಬಾ ಕಡಿಮೆ ಪ್ರಮಾಣದ ಮತದಾನವಾಗಲಿದೆ. ಅಧ್ಯಕ್ಷೀಯ ಹುದ್ದೆಯ ಓಟದಲ್ಲಿ 4 ಜನ ಸ್ಪರ್ಧಿಗಳಿದ್ದಾರೆ. ಸುಪ್ರೀಂಕೋರ್ಟ್​ ಮಾಜಿ ಮುಖ್ಯಸ್ಥರಾದ ಇಬ್ರಾಹಿಂ ರೈಸಿ, ಸೆಂಟ್ರಲ್ ಬ್ಯಾಂಕ್ ಮಾಜಿ ಮುಖ್ಯಸ್ಥ ಅಬ್ದುಲ್ ನಾಸಿರ್ ಹೆಮ್ಮಾತಿ, ಇಸ್ಲಾಮಿಕ್ ರೆವಲೂಷನರಿ ಗಾರ್ಡ್ಸ್​​ ಕಾಪ್ಸ್​​​ನ ಮಾಜಿ ಕಮಾಂಡರ್​​ ಮೊಹಸಿನ್ ರೆಜಾಯಿ, ಸಂಸದರಾಗಿರೋ ಆಮಿರ್ ಹುಸೇನ್​​ ರೇಸ್​​ನಲ್ಲಿದ್ದಾರೆ. ಆದ್ರೆ ಇವರ ಪೈಕಿ ಸುಪ್ರೀಂಕೋರ್ಟ್​ ಮಾಜಿ ಮುಖ್ಯಸ್ಥ ಇಬ್ರಾಹಿಂ ರೈಸಿ ರೇಸ್​​​​ನಲ್ಲಿ ತುಂಬಾ ಮುಂದೆ ಓಡ್ತಿದ್ದಾರೆ.

ಇಲ್ಲಿನ ಅಧ್ಯಕ್ಷ ಯಾರಾಗ್ತಾರೆ ಅನ್ನೋದನ್ನ ಅಂದಾಜಿಸೋ ಮುನ್ನ ಚುನಾವಣೆ ಹೇಗೆ ನಡೆಯುತ್ತೆ..? ವ್ಯವಸ್ಥೆ ಹೇಗಿದೆ ಅನ್ನೋದನ್ನ ಮೊದಲು ತಿಳ್ಕೋಬೇಕಾಗುತ್ತೆ. ಇಲ್ಲಿ ದೇಶದ ಸರ್ವೋಚ್ಛ ನಾಯಕ ಅಂದ್ರೆ ಸುಪ್ರೀಂ ಲೀಡರ್ ಸ್ಥಾನಮಾನ ಇದೆ. 1979ರ ಇಸ್ಲಾಮಿಕ್ ಕ್ರಾಂತಿಯ ಬಳಿಕ ಇಲ್ಲಿ 88 ಧರ್ಮಗುರುಗಳ ಒಂದು ಸಮಿತಿ ಸುಪ್ರೀಂ ಲೀಡರ್ ಆಗಿ ಆಯತೊಲ್ಲಾ ಖೊಮೇನಿಯನ್ನು ಆಯ್ಕೆ ಮಾಡ್ತು. ಇವರು 1989ರಲ್ಲಿ ಸಾವನ್ನಪ್ಪಿದ ಬಳಿಕ ಆಯತೊಲ್ಲಾ ಖಮೇನಿಯನ್ನು ಆಯ್ಕೆ ಮಾಡಲಾಯ್ತು. ಈ ಪೋಸ್ಟ್​​​ಗೆ ಯಾರಾದ್ರೂ ಆಯ್ಕೆಯಾದ್ರೆ ಅವರು ಜೀವನ ಪರ್ಯಂತ ಅಧಿಕಾರದಲ್ಲಿರ್ತಾರೆ. 1989ರಲ್ಲಿ ಆಯ್ಕೆಯಾದ ಸುಪ್ರೀಂ ಲೀಡರ್ ಆಯತೊಲ್ಲಾ ಖಮೇನಿ ಇನ್ನೂ ಕೂಡ ಸುಪ್ರೀಂ ಲೀಡರ್ ಆಗಿದ್ದಾರೆ. ಆದ್ರೆ ಇಲ್ಲಿ ಪ್ರತಿಯೊಂದು ಕೂಡ ಇನ್​ಡೈರೆಕ್ಟ್​​ ಆಗಿ ಸುಪ್ರೀಂ ಲೀಡರ್ ಮೂಲಕವೇ ನಿರ್ಧಾರವಾಗುತ್ತೆ. ಇಲ್ಲಿ ಗಾರ್ಡಿಯನ್ ಕೌನ್ಸಿಲ್ ಅಂತ 12 ಜನರ ಒಂದು ಸಮಿತಿ ಇದೆ. ಇದ್ರ ಸದಸ್ಯರ ಪೈಕಿ 6 ಮಂದಿಯನ್ನು ಸುಪ್ರೀಂ ಲೀಡರ್ ನೇರವಾಗಿ ಆಯ್ಕೆ ಮಾಡ್ತಾರೆ. ಇನ್ನುಳಿದ 6 ಮಂದಿಯನ್ನು ಸುಪ್ರೀಂ ಲೀಡರ್​ನಿಂದಲೇ ಆಯ್ಕೆಯಾಗೋ ಸುಪ್ರೀಂಕೋರ್ಟ್​ ಮುಖ್ಯಸ್ಥ ನೇಮಕ ಮಾಡ್ತಾರೆ.. ಈ ಮೂಲಕ 12 ಜನರ ಸಮಿತಿಯಲ್ಲಿ ಇರೋರೆಲ್ಲರೂ ಸುಪ್ರೀಂ ಲೀಡರ್ ಪರವಾಗಿ ಇರೋರೆ ಆಗಿರ್ತಾರೆ. ಇದು ಎಲ್ಲಾ ಚುನಾವಣೆಗಳ ಮೇಲೆ ಕಂಟ್ರೋಲ್ ಹೊಂದಿರುತ್ತೆ. ಅಂದ್ರೆ ಸುಪ್ರೀಂ ಲೀಡರ್​​ನ್ನು ಆಯ್ಕೆ ಮಾಡ್ತಾರಲ್ವಾ ಧರ್ಮ ಗುರುಗಳ ಸಮಿತಿ.. ಅದರ ಸದಸ್ಯರಿಗೆ 8 ವರ್ಷಕ್ಕೊಮ್ಮೆ ಚುನಾವಣೆ ನಡೆದು ಅದರ ಅಭ್ಯರ್ಥಿಗಳನ್ನು ಫೈನಲ್ ಮಾಡೋದು ಇದೇ ಗಾರ್ಡಿಯನ್ ಕೌನ್ಸಿಲ್.. ಈಗ ಅಧ್ಯಕ್ಷೀಯ ಚುನಾವಣೆ ನಡೀತಾ ಇದ್ಯಲ್ವಾ.. ಅದ್ರ ಅಭ್ಯರ್ಥಿಗಳನ್ನು ಆಯ್ಕೆ ಮಾಡೋದು ಕೂಡ ಇದೇ ಗಾರ್ಡಿಯನ್ ಕೌನ್ಸಿಲ್.. ಸುಪ್ರೀಂ ಲೀಡರ್​ ಕೂಡ ಓರ್ವ ಅಭ್ಯರ್ಥಿಯನ್ನು ಅಧ್ಯಕ್ಷೀಯ ಚುನಾವಣೆಗೆ ಆಯ್ಕೆ ಮಾಡ್ತಾರೆ. ನಂತರ ಗಾರ್ಡಿಯನ್ ಕೌನ್ಸಿಲ್ ಉಳಿದ ಅಧ್ಯಕ್ಷೀಯ ಚುನಾವಣೆಯ ಉಮೇದುವಾರರನ್ನು ಫಿಲ್ಟರ್ ಮಾಡ್ತಾರೆ. ಸುಪ್ರೀಂ ಲೀಡರ್ ಆಯ್ಕೆ ಮಾಡಿದ ಅಭ್ಯರ್ಥಿ ವಿರುದ್ಧ ವಿನ್ ಆಗುವಂಥಹ ಕ್ಯಾಂಡಿಡೇಟ್​​​ಗಳಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶವೇ ಕೊಡಲ್ಲ. ಹೀಗಾಗಿ ಸುಪ್ರೀಂ ಲೀಡರ್​ ಆಯ್ಕೆ ಮಾಡೋ ಅಭ್ಯರ್ಥಿ ಗೆಲುವು ಫಿಕ್ಸ್ ಆಗಿರುತ್ತೆ. ಅದೇ ರೀತಿ ಈ ಸಲ ಸುಪ್ರೀಂಕೋರ್ಟ್​ ಮಾಜಿ ಮುಖ್ಯಸ್ಥ ಇಬ್ರಾಹಿಂ ರೈಸಿ ಸುಪ್ರೀಂ ಲೀಡರ್ ಆಯ್ಕೆಯಾಗಿದ್ದಾರೆ. ಸೋ ಅವರು ವಿನ್ ಆಗೋದು ಬಹುತೇಕ ಫಿಕ್ಸ್ ಆಗಿದೆ. ಅಷ್ಟೇ ಅಲ್ಲ.. ಈ ಇಬ್ರಾಹಿ ರೈಸಿ ಮುಂದಿನ ದಿನಗಳಲ್ಲಿ ಆಯತೊಲ್ಲಾ ಖಮೇನಿಯ ಉತ್ತರಾಧಿಕಾರಿಯಾಗೋ ಸಾಧ್ಯತೆ ಕೂಡ ಇದೆ ಅಂತ ಚರ್ಚೆ ನಡೀತಾ ಇದೆ. ನ್ಯಾಯಾಂಗದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿರೋ ಇವರು 1988ರಲ್ಲಿ ದೊಡ್ಡ ಮಟ್ಟದಲ್ಲಿ ರಾಜಕೀಯ ಕೈದಿಗಳನ್ನು ಮರಣದಂಡನೆ ಶಿಕ್ಷೆಗೆ ಒಳಪಡಿಸಿದ್ರು. ಇವರಿಗೆ ಮಾಸ್ ಜನ ಬೆಂಬಲ ಇದೆ. 2017ರಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿ ಸೋತಿದ್ರು. ಆದ್ರೂ ಕೂಡ ಸುಪ್ರೀಂ ಲೀಡರ್ ಆಯತೊಲ್ಲಾ ಖಮೇನಿ ಸುಪ್ರೀಂಕೋರ್ಟ್​ ಮುಖ್ಯಸ್ಥರನ್ನಾಗಿ ನೇಮಿಸಿದ್ರು.

-masthmagaa.com

Contact Us for Advertisement

Leave a Reply