ಚಿತ್ರ ನಿರ್ಮಾಪಕನ ಮೇಲೆ ನಿರ್ಬಂಧ ಹೇರಿದ ಇರಾನ್‌! ಕಾರಣ?

masthmagaa.com:

ಇರಾನ್‌ ಚಿತ್ರ ನಿರ್ಮಾಪಕ ರೇಝಾ ಡಾರ್ಮಿಶಿಯನ್‌ ಅವ್ರನ್ನ ಭಾರತಕ್ಕೆ ತೆರಳದಂತೆ ಅಲ್ಲಿನ ಸರ್ಕಾರ ನಿರ್ಬಂಧ ಹೇರಿದೆ. ಗೋವಾದ International Film Festival of India (IFFI) ಸ್ಪರ್ಧೆಯಲ್ಲಿ ಭಾಗವಹಿಸೋಕೆ ರೇಝಾ ಬರ್ಬೇಕಾಗಿತ್ತು. IFFI ರೇಝಾರನ್ನ ಇನ್ವೈಟ್‌ ಮಾಡಿದ್ದು ಅವ್ರ ನಿರ್ಮಾಣ ಮಾಡಿರೋ ʻಎ ಮೈನರ್‌ʼ ಚಿತ್ರದ ಪ್ರದರ್ಶನಕ್ಕೆ ಸಮಯವನ್ನ ಕೂಡ ನಿಗದಿ ಪಡಿಸಿತ್ತು. ಆದ್ರೆ ಇರಾನ್‌ ಸರ್ಕಾರ ರೇಝಾರನ್ನ ಏರ್‌ಪೋರ್ಟ್‌ನಲ್ಲೇ ತಡೆದು ಪಾಸ್‌ಪೋರ್ಟ್‌ ಕಸಿದುಕೊಂಡಿದೆ ಅಂತ ಹೇಳಲಾಗ್ತಿದೆ. ಯಾಕಂದ್ರೆ ಇರಾನ್‌ನಲ್ಲಿ ನಡಿತಿರೋ ಹಿಜಾಬ್‌ ವಿರೋಧಿ ಪ್ರತಿಭಟನೆಗೆ ರೇಝಾ ಸಪೋರ್ಟ್‌ ಮಾಡಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ಗಳನ್ನ ಶೇರ್‌ ಮಾಡಿದ್ರು. ಈ ಹಿನ್ನಲೆಯಲ್ಲಿ ಅವ್ರಿಗೆ ದೇಶ ಬಿಟ್ಟು ಹೋಗದಂತೆ ನಿರ್ಬಂಧ ಹೇರಲಾಗಿದೆ.

-masthmagaa.com

Contact Us for Advertisement

Leave a Reply