ಇರಾನ್‌ನಲ್ಲಿ ಹಿಜಾಬ್‌ ಹಾಕದ ಇಬ್ಬರು ನಟಿಯರ ಬಂಧನ!

masthmagaa.com:

ಇರಾನ್‌ನಲ್ಲಿ ಹಿಜಾಬ್‌ ಕಾಳಗ ದಿನಕ್ಕೊಂದು ರೂಪ ಪಡೆದುಕೊಳ್ತ ಇದೆ. ಇದೀಗ ಹೆಂಗಮೆಹ್ ಘಜಿಯಾನಿ ಮತ್ತು ಕಟಯೌನ್ ರಿಯಾಹಿ ಎಂಬ ಇಬ್ಬರು ಇರಾನಿ ನಟಿಯರನ್ನ ಸಾರ್ವಜನಿಕವಾಗಿ ಹಿಜಾಬ್‌ ಹಾಕಿಲ್ಲ ಅಂತ ಹೇಳಿ ಆರೆಸ್ಟ್‌ ಮಾಡಲಾಗಿದೆ. 52 ವರ್ಷದ ಘಜಿಯಾನಿ ಸಾಮಾಜಿಕ ಮಾಧ್ಯಮದಲ್ಲಿ ಹಿಜಾಬ್‌ ಹಾಕದೆ ಇರುವ ಪೋಸ್ಟ್‌ ಹಾಕಿದ್ದಾರೆ, ಗಲಭೆಗಳನ್ನ ಪ್ರಚೋದಿಸ್ತಾ ಇದ್ದಾರೆ, ಬೆಂಬಲಿಸ್ತಾ ಇದ್ದಾರೆ, ಶತ್ರುಗಳ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ ಅಂತ ಇವರನ್ನ ಬಂಧಿಸಲಾಗಿದೆ. ಇನ್ನು ಈ ಹಿಂದೆಯೇ ನಟಿ ತನಗೆ ನ್ಯಾಯಾಲಯದಿಂದ ಸಮನ್ಸ್‌ ಬಂದಿದೆ ಅಂತ ಹೇಳಿದ್ರು. ಆದ್ರೆ ನಂತ್ರ ಹಿಜಾಬ್‌ ಇಲ್ಲದೆ ಇರುವ ವೀಡಿಯೋವನ್ನ ಹಾಕಿ ಅರೆಸ್ಟ್‌ ಆಗಿದ್ದಾರೆ.ಇನ್ನು 60 ವರ್ಷದ ಕಟಯೌನ್ ರಿಯಾಹಿ ಎಂಬ ನಟಿ ಲಂಡನ್ ಮೂಲದ ಇರಾನ್ ಇಂಟರ್‌ನ್ಯಾಷನಲ್ ಟಿವಿಗೆ ಸಂದರ್ಶನವನ್ನು ನೀಡಿದ್ರು. ಈ ಸಂದರ್ಭದಲ್ಲಿ ಅವ್ರು ಹಿಜಾಬ್‌ ಹಾಕಿಲ್ಲ ಹೀಗಾಗಿ ಅವ್ರು ಬಂಧನಕ್ಕೊಳಗಾಗಿದ್ದಾರೆ.

-masthmagaa.com

Contact Us for Advertisement

Leave a Reply