masthmagaa.com:

ಇರಾಕ್‌ನ ಪ್ರಭಾವಿ ಸೇನಾ ನಾಯಕ ಹಾಗೂ ಜನರಲ್‌ ಒಬ್ಬರ ಹತ್ಯೆಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಇರಾಕ್‌ನ ಕೋರ್ಟ್​​ ಒಂದು ಅರೆಸ್ಟ್​ ವಾರಂಟ್ ಜಾರಿ ಮಾಡಿದೆ. ಅಮೆರಿಕ ಡ್ರೋನ್ ದಾಳಿಯಲ್ಲಿ ಇರಾಕ್ ನಾಯಕ, ಮೊಬಿಲೈಸೇಷನ್ ಕಮಿಟಿಯ ಮುಖ್ಯಸ್ಥರಾಗಿದ್ದ ಅಬು ಮಹ್ದಿ ಅಲ್‌-ಮುಹಂದೀಸ್ ಸಾವನ್ನಪ್ಪಿದ್ರು. ಅದೇ ದಾಳಿಯಲ್ಲಿ ಇರಾನ್ ರೆವಲೂಷನರಿ ಗಾರ್ಡ್​ ಕಾರ್ಪ್ಸ್​​​​​​​​ ಮುಖ್ಯಸ್ಥ ಖಾಸಿಂ ಸೊಲೇಮನಿ ಕೂಡ ಸಾವನ್ನಪ್ಪಿದ್ರು. ಈ ಸಂಬಂಧ ವಿಚಾರಣೆ ನಡೆಸುತ್ತಿರುವ ಬಾಗ್ದಾದ್ ನ್ಯಾಯಾಲಯ ಟ್ರಂಪ್ ವಿರುದ್ಧ ಪೂರ್ವಯೋಜಿತ ಕೊಲೆ ಆರೋಪದ ಮೇಲೆ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಈ ಆರೋಪ ಸಾಬೀತಾದ್ರೆ ಟ್ರಂಪ್​​ಗೆ ಮರಣದಂಡನೆ ಶಿಕ್ಷೆ ವಿಧಿಸಲೂ ಅವಕಾಶವಿದೆ.

-masthmagaa.com

Contact Us for Advertisement

Leave a Reply