ಇರಾಕ್‌ನಲ್ಲಿ ಯುಟ್ಯೂಬರ್‌ ಹತ್ಯೆ! ಮಗಳನ್ನೇ ಕೊಂದ ತಂದೆ!

masthmagaa.com:

ಇರಾಕ್‌ನ ಯುಟ್ಯೂಬರ್‌ ಟೀಬಾ ಅಲ್‌ ಅಲಿ ಅನ್ನೊ ಯುವತಿಯನ್ನ ಆಕೆಯ ತಂದೆಯೇ ಹತ್ಯೆ ಮಾಡಿದ್ದಾರೆ. ಟರ್ಕಿಯಲ್ಲಿ ವಾಸವಾಗಿದ್ದ ಟೀಬಾಳನ್ನ ಆಕೆ ತಂದೆ ಮನೆಗೆ ಕರೆದಿದ್ದಾರೆ. ಆದ್ರೆ ಮನೆಗೆ ಬರೋಕೆ ನಿರಾಕರಿಸಿದ್ದಕ್ಕೆ ಹತ್ಯೆ ಮಾಡಿದ್ದಾರೆ ಅಂತ ವರದಿಯಾಗಿದೆ. ಇನ್ನು ಆಕೆಯ ತಂದೆ ತಾನೇ ಕೊಲೆ ಮಾಡಿರೋದಾಗಿ ಒಪ್ಪಿಕೊಂಡು ಪೊಲೀಸರಿಗೆ ಸರೆಂಡರ್‌ ಆಗಿದ್ದಾರೆ. ಈ ಘಟನೆಯಿಂದ ಆಕ್ರೋಶಗೊಂಡಿರೋ ಇರಾಕ್‌ನ ಜನ ಪ್ರತಿಭಟನೆ ಮಾಡಿದ್ದಾರೆ. ಜೊತೆಗೆ ವಿಶ್ವಸಂಸ್ಥೆ ಕೂಡ ಈ ಘಟನೆಯನ್ನ ಖಂಡಿಸಿದೆ. ಇರಾಕ್‌ನಲ್ಲಿ ಮಹಿಳೆ ಮತ್ತು ಹೆಣ್ಣು ಮಕ್ಕಳ ರಕ್ಷಣೆಗೆ ಕಠಿಣ ಕಾನೂನು ತರೋವರೆಗೂ ಈ ರೀತಿ ಹಿಂಸಾಚಾರ ಮುಂದುವರೆಯುತ್ತೆ ಅಂತ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಹೇಳಿದೆ.

-masthmagaa.com

Contact Us for Advertisement

Leave a Reply