masthmagaa.com:

ಏಲಿಯನ್​ ಅಥವಾ ಅನ್ಯಗ್ರಹ ಜೀವಿಗಳು ಇದಾವೋ.? ಇಲ್ಲವೋ..? ಎಂಬ ಬಗ್ಗೆ ಜಗತ್ತಿನಾದ್ಯಂತ ಪರ, ವಿರೋಧದ ಚರ್ಚೆಗಳು ನಡೆಯುತ್ತಿರುವಾಗಲೇ ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ‘ಏಲಿಯನ್’ವೊಂದನ್ನು ವಶಕ್ಕೆ ಪಡೆದಿದ್ದಾರೆ ಅಂತ ಸುದ್ದಿಯಾಗಿದೆ. ಹಾಗಿದ್ರೆ ನೋಯ್ಡಾ ಪೊಲೀಸರಿಗೆ ಏಲಿಯನ್ ಸಿಕ್ಕಿದ್ದು ನಿಜಾನಾ ಅನ್ನೋದಕ್ಕೆ ಇಲ್ಲಿದೆ ಉತ್ತರ.

ಅಂದ್ಹಾಗೆ ಶನಿವಾರ ಬೆಳಗ್ಗೆ ನೋಯ್ಡಾದ ಆಗಸದಲ್ಲಿ ಮಾನವನ ಆಕೃತಿಯೊಂದು ತೇಲುತ್ತಾ ಭೂಮಿಕಡೆ ಬರುತ್ತಿತ್ತು. ಹತ್ತಿರ ಬಂದಂತೆ ಅದು ಹಾಲಿವುಡ್ ಸಿನಿಮಾದ ‘ಐರನ್ ಮ್ಯಾನ್​’ ರೀತಿ ಕಾಣಿಸಿದೆ. ಈಗಾಗಲೇ ಏಲಿಯನ್​ಗಳ ಬಗ್ಗೆ ನಾನಾ ಕಥೆಗಳನ್ನು ಕೇಳಿ ಸುಸ್ತಾಗಿದ್ದ ಜನ ಇದು ಕೂಡ ಏಲಿಯನ್ ಇರಬಹುದು. ನಮ್ಮ ಮೇಲೆ ದಾಳಿ ನಡೆಸಲೆಂದೇ ಏಲಿಯನ್​ ಬಂದಿದೆ ಅಂದುಕೊಂಡಿದ್ದರು.

ಆ ಆಕೃತಿ ಭೂಮಿ ಮೇಲೆ ಒಂದು ಹಳ್ಳದಲ್ಲಿ ಲ್ಯಾಂಡ್ ಆಗಿದೆ. ಆದ್ರೂ ಕೂಡ ಅದರ ಬಳಿ ಹೋಗಲು ಜನ ಹೆದರಿದ್ದಾರೆ. ಕೊನೆಗೆ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಆಗಲೇ ಗೊತ್ತಾಗಿದ್ದು ಅದು ಏಲಿಯನ್ ಅಲ್ಲ ಐರನ್ ಮ್ಯಾನ್ ಹೋಲುವ ಬಲೂನ್ ಅಂತ. ಆದ್ರೆ ಈ ಬಲೂನ್ ಹಾರಿಸಿದ್ದು ಯಾರು ಅನ್ನೋದು ಗೊತ್ತಾಗಿಲ್ಲ. ಹೀಗಾಗಿ ಪೊಲೀಸರು ಸದ್ಯ ಏಲಿಯನ್ ಅಂದುಕೊಂಡಿದ್ದ ಬಲೂನ್​ ಅನ್ನು ವಶಪಡಿಸಿಕೊಂಡಿದ್ದಾರೆ. ಸೋ ನೋಯ್ಡಾ ಪೊಲೀಸರ ವಶದಲ್ಲಿರೋದು ಏಲಿಯನ್ ಅಲ್ಲ.. ಅದೊಂದು ಬಲೂನ್ ಅಷ್ಟೇ..

-masthmagaa.com

Contact Us for Advertisement

Leave a Reply