ಅಮೆರಿಕ-ಇಸ್ರೇಲ್‌ ಡಿಶುಂ ಡಿಶುಂ! ಅಣ್ಣತಮ್ಮಂದಿರ ಥರ ಇದ್ದೋರು ಇದ್ದಕ್ಕಿದ್ದಂತೆ ಬೀದಿಯಲ್ಲಿ ಜಗಳ!

masthmagaa.com:

ಅಮೆರಿಕ ಹಾಗೂ ಇಸ್ರೇಲ್‌ ನಡುವೆ ಮೊದಲಿನಂತೆ ಸಂಬಂಧ ಸರಿ ಇಲ್ಲ ಅನ್ನೋ ಗುಸು ಗುಸು ಓಡಾಡ್ತಿರೋ ಹೊತ್ತಲ್ಲೇ ಆ ಮುನಿಸು ಬೀದಿ ಜಗಳವಾಗಿ ಮಾರ್ಪಟ್ಟಿದೆ. ಅದ್ರಲ್ಲೂ ಬೈಡೆನ್‌ ನೇತೃತ್ವದ ಅಮೆರಿಕ ಹಾಗೂ ನೆತನ್ಯಾಹು ನೇತೃತ್ವದ ಇಸ್ರೇಲ್‌ ನಡುವೆ ಟಾಕ್‌ ವಾರ್‌ ಫುಲ್‌ ಜೋರಾಗಿದೆ. ಹೊಸ ಕಾನೂನು ಸುಧಾರಣೆಯನ್ನ ವಿರೋಧಿಸಿ ಇಸ್ರೇಲ್‌ನಲ್ಲಿ ನಡೀತಿದ್ದ ಪ್ರತಿಭಟನೆಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮೂಗು ತೂರಿಸಿ ಹೊಸ ಕಾನೂನು ಸುಧಾರಣೆಯನ್ನ ಹಿಂತೆಗೆದುಕೊಳ್ಳಬೇಕು. ಜನ ಈ ರೀತಿ ರೋಡಲ್ಲಿ ಸ್ಟ್ರೈಕ್‌ ಮಾಡ್ಕೊಂಡು ನಿಂತ್ಕೋಬಾರ್ದು. ಇಸ್ರೇಲ್‌ ಸರ್ಕಾರ ಇದನ್ನ ಆದಷ್ಟು ಬೇಗ ಬಗೆಹರಿಸುತ್ತೆ ಅಂತ ಭಾವಿಸ್ತೀನಿ ಅಂತ ಬೈಡೆನ್‌ ಹೇಳಿಕೆ ಕೊಟ್ಟಿದ್ರು. ಇದಕ್ಕೆ ಈಗ ತಿರುಗೇಟು ಕೊಟ್ಟಿರೋ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಇಸ್ರೇಲ್‌ ಒಂದು ಸ್ವತಂತ್ರ ಸಾರ್ವಭೌಮ ದೇಶ. ನಮ್ಮ ಜನರಿಗೆ ಏನ್‌ ಬೇಕು ಏನ್‌ ಬೇಡ ಅನ್ನೋದನ್ನ ನಮ್ಮ ಜನಾನೇ ಡಿಸೈಡ್‌ ಮಾಡ್ತಾರೆ. ನಮಗೆ ಹೊರಗಿನಿಂದ ಆದೇಶ ಬರಬೇಕಿಲ್ಲ. ಅದು ನಮ್ಮ ಬೆಸ್ಟ್‌ ಫ್ರೆಂಡ್‌ ಆದ್ರೂ ಸರಿ. ಒತ್ತಡ ಮಾಡೋಕಾಗಲ್ಲ ಅಂತ ಕಟುವಾಗಿ ಉತ್ತರ ಕೊಟ್ಟಿದ್ದಾರೆ. ಇದೇ ವೇಳೆ ಇಸ್ರೇಲ್‌ ವಿಚಾರದಲ್ಲಿ ಅಮೆರಿಕದ ಕಮ್ಮಿಟ್‌ಮೆಂಟ್‌ಗೆ, ನಮ್ಮ ಜೊತೆಗೆ ಅವರು ನಿಂತಿರೋದಕ್ಕೂ ನಾವು ಅವರನ್ನ ಅಪ್ರಿಶಿಯೇಟ್‌ ಮಾಡ್ತೀವಿ ಅಂತ ಹೇಳಿದ್ದಾರೆ. ಈ ಮೂಲಕ ಅಮೆರಿದಂತ ದೊಡ್ಡ ಫ್ರೆಂಡ್ಸ್‌ಗೂ ನೆತನ್ಯಾಹು ವಾರ್ನ್‌ ಮಾಡೋ ರೀತಿ ಆಗಿದೆ. ಯಾಕಂದ್ರೆ ಇಸ್ರೇಲ್‌ ಅನ್ನೋ ದೇಶದ ಉಗಮಕ್ಕೆ ಅಮೆರಿಕದ ಕೊಡುಗೆ ತುಂಬಾ ದೊಡ್ಡದು. ಐತಿಹಾಸಿಕವಾಗಿ ಈ ಎರಡೂ ದೇಶಗಳು ಎಲ್ಲಾ ಕ್ಷೇತ್ರಗಳಲ್ಲೂ ದೊಡ್ಡ ಸಹಕಾರವನ್ನ ಹೊಂದಿವೆ. ಆದ್ರೆ ಬೈಡೆನ್‌ ಅಧಿಕಾರಕ್ಕೆ ಬಂದ್ಮೇಲೆ ಇಸ್ರೇಲ್‌ ಜೊತೆಗಿನ ಸಂಬಂಧ ಹಿಂದೆಂದಿಗಿಂತಲೂ ಹದಗೆಡ್ತಾ ಇದೆ. ಈಗ ಅದು ಮತ್ತೊಂದು ಹಂತ ತಲುಪಿದ್ದು ನಾಯಕರು ಒಬ್ರ ವಿರುದ್ದ ಒಬ್ರು ಮಾತನಾಡವಷ್ಟು.

-masthmagaa.com

Contact Us for Advertisement

Leave a Reply