ಮತ್ತೆ ಗಾಜಾ ಮೇಲೆ ಇಸ್ರೇಲ್​​​​ನಿಂದ ಏರ್​​ಸ್ಟ್ರೈಕ್​!

masthmagaa.com:

ಇಸ್ರೇಲ್​​ನಲ್ಲಿ ಸರ್ಕಾರ ಬದಲಾಗ್ತಿದ್ದಂತೆ ಪಕ್ಕದ ಗಾಜಾ ಜೊತೆಗೆ ಮತ್ತೊಂದು ಹಂತದ ಸಂಘರ್ಷ ಶುರುವಾಗಿದೆ. ಗಾಜಾ ಕಡೆಯಿಂದ ಹಮಾಸ್ ಪಡೆ ನಿರಂತರವಾಗಿ ಸ್ಪೋಟಕ ತುಂಬಿದ ಬಲೂನುಗಳನ್ನು ಇಸ್ರೇಲ್ ಕಡೆಗೆ ಕಳುಹಿಸ್ತಿದ್ದು, ಇದಕ್ಕೆ ಪ್ರತಿಯಾಗಿ ಇಸ್ರೇಲ್ ಮತ್ತೆ ಗಾಜಾ ಮೇಲೆ ಏರ್​​ಸ್ಟ್ರೈಕ್​​​ ನಡೆಸಿದೆ. ಈ ಮೂಲಕ 3 ದಿನಗಳಲ್ಲಿ ಎರಡೆರಡು ಬಾರಿ ಕದನ ವಿರಾಮ ಉಲ್ಲಂಘಿಸಿದಂತಾಗಿದೆ. ಇಸ್ರೇಲ್​​​​​ ಏರ್​​ಸ್ಟ್ರೈಕ್​​​​​​​​ನಿಂದ ಯಾವುದೇ ಹಾನಿ ಕುರಿತು ಇನ್ನೂ ವರದಿಯಾಗಿಲ್ಲ. ಆದ್ರೆ ಇಡೀ ಗಾಜಾ ಸಿಟಿಗೆ ಈ ದಾಳಿಯ ಶಬ್ದ ಕೇಳಿಸಿದೆ. ಅಷ್ಟು ದೊಡ್ಡದಾಗಿತ್ತು ಏರ್​​ಸ್ಟ್ರೈಕ್​​​​. ಹಮಾಸ್​​ನ ಮಿಲಿಟರಿ ಕಾಂಪೌಂಡ್​​​, ರಾಕೆಟ್ ಲಾಂಚ್ ಸೈಟ್​​ ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಗಾಜಾ ಕಡೆಯಿಂದ ನಿರಂತರವಾಗಿ ಸ್ಫೋಟಕ ಹೊತ್ತ ಬಲೂನ್​​ಗಳು ಬರ್ತಿವೆ. ಅದಕ್ಕೆ ಪ್ರತಿಯಾಗಿ ಈ ದಾಳಿ ನಡೆಸಿದ್ದೀವಿ ಅಂತ ಇಸ್ರೇಲ್ ಸೇನೆ ತಿಳಿಸಿದೆ. ಮೊನ್ನೆ ಬೆಳಗ್ಗೆ ಕೂಡ ಇಸ್ರೇಲ್ ರಾಕೆಟ್ ದಾಳಿ ನಡೆಸಿದ್ದು, ಅದ್ರಲ್ಲೂ ಯಾರಿಗೂ ಏನೂ ಹಾನಿ ಆಗಿರಲಿಲ್ಲ. ಅಂದಹಾಗೆ ಮೊನ್ನೆ ಜೆರುಸಲೆಂನಲ್ಲಿ ಯಹೂದಿಗಳು ಮೆರವಣಿಗೆ ನಡೆಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿ ಹಮಾಸ್ ಈ ರೀತಿ ಸ್ಪೋಟಕ ತುಂಬಿದ ಬಲೂನ್ ಕಳುಹಿಸಿತ್ತು. ಅದಕ್ಕೆ ಇಸ್ರೇಲ್ ರಾಕೆಟ್ ದಾಳಿ ನಡೆಸಿತ್ತು. ಇದ್ರ ಬೆನ್ನಲ್ಲೇ ಪೂರ್ವ ಜೆರುಸಲೆಂನ ಶೇಖ್​​ ಜಾರಾದಲ್ಲಿ ಯಹೂದಿಯವರು ನೆಲೆಸುತ್ತಿದ್ದು, ಅದ್ರ ವಿರುದ್ಧ ಪ್ಯಾಲೆಸ್ತೇನಿಯರು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಈ ವೇಳೆ ಅವರನ್ನು ತಡೆಯೋಕೆ ಪೊಲೀಸರು ಜಲಫಿರಂಗಿ ಮತ್ತು ಸ್ಟನ್ ಗ್ರನೇಡ್​ಗಳನ್ನು ಬಳಸಿದ್ದಾರೆ. ನಂತರ ಪ್ಯಾಲೆಸ್ತೇನಿಯರು ಯಹೂದಿಗಳ ಮೇಲೆ ಕಲ್ಲು, ನೀರಿನ ಬಾಟಲಿ ಎಸೆಯೋಕೆ ಶುರು ಮಾಡಿದ್ದಾರೆ. ಈ ವೇಳೆ ಪೊಲೀಸರ ಕ್ರಮಕ್ಕೆ ಹಲವು ಪ್ಯಾಲೆಸ್ತೇನಿಯರು ಗಾಯಗೊಂಡಿದ್ದಾರೆ. ಇದ್ರ ಬೆನ್ನಲ್ಲೇ ಮತ್ತಷ್ಟು ಸ್ಪೋಟಕ ಹೊತ್ತ ಬಲೂನ್​​ಗಳನ್ನು ಕಳುಹಿಸಿದೆ ಹಮಾಸ್​​..

ಇನ್ನೊಂದು ವಿಚಾರ ಅಂದ್ರೆ ಇಸ್ರೇಲ್ ಕಡೆಯಿಂದ ಈಗ ಏರ್​ಸ್ಟ್ರೈಕ್​ ನಡೆಸಿರೋ ತಂಡದಲ್ಲಿ ಭಾರತ ಮೂಲದ 20 ವರ್ಷದ ನಿತ್ಶಾ ಮುಲಿಯಶ ಕೂಡ ಸೇರಿದ್ದಾರೆ. ಇವರು ಇಸ್ರೇಲ್ ಡಿಫೆನ್ಸ್ ಫೋರ್ಸ್​​ನಲ್ಲಿ ಕೆಲಸ ಮಾಡ್ತಿದ್ದು, ಗುಜರಾತ್​​ನ ರಾಜ್​ಕೋಟ್​​​​​ ಮೂಲದವರಾಗಿದ್ದಾರೆ. ಇವರು ಇಸ್ರೇಲ್​​ನ ವಾಣಿಜ್ಯ ನಗರಿ ಟೆಲ್ ಅವೀವ್​​ನಲ್ಲಿ ನೆಲೆಸಿದ್ದು, ಇಸ್ರೇಲ್ ಸೇನೆ ಸೇರಿರೋ ಮೊದಲ ಗುಜರಾತಿ ಹುಡುಗಿಯಾಗಿದ್ದಾರೆ. ಅವರು ಮಾತ್ರ ಅಲ್ಲ.. ಅವರ ತಂಗಿ 18 ವರ್ಷದ ರಿಯಾ ಕೂಡ ಇದೇ ವರ್ಷ ಸೇನೆ ಸೇರಿದ್ದಾರೆ. ಅಂದಹಾಗೆ ಇಸ್ರೇಲ್​​ನಲ್ಲಿ ಮಿಲಿಟರಿ ಶಿಕ್ಷಣ ಎಲ್ಲರಿಗೂ ಕಡ್ಡಾಯ. ಸುತ್ತಲೂ ಶತ್ರುಗಳು ತುಂಬಿರೋ ಕಾರಣ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮಿಲಿಟರಿ ಶಿಕ್ಷಣ ನೀಡಲಾಗುತ್ತೆ.

-masthmagaa.com

Contact Us for Advertisement

Leave a Reply