ಇಸ್ರೋದಿಂದ ಸಿಹಿಸುದ್ದಿ..ಎಲ್ಲರಿಗೂ ಶೇರ್ ಮಾಡಿ…

ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿತಗೊಂಡು ಪುನಃ ಸಂಪರ್ಕ ಸಾಧಿಸೋದು ಸಾಧ್ಯವಾಗಲೇ ಇಲ್ಲ. ಆದ್ರೆ ಚಂದ್ರಯಾನ-2 ಆರ್ಬಿಟರ್ ಚೆನ್ನಾಗಿ ಕೆಲಸ ಮಾಡುತ್ತಿದೆ ಅಂತ ಇಸ್ರೋ ಮುಖ್ಯಸ್ಥ ಶಿವನ್ ತಿಳಿಸಿದ್ದಾರೆ. ಗುಜರಾತ್‍ನಲ್ಲಿ ಮಾತನಾಡಿದ ಅವರು, ಆರ್ಬಿಟರ್ ಉತ್ತಮ ರೀತಿಯಲ್ಲಿ ಕೆಲಸ ಆರಂಭಿಸಿದೆ. ಅದು ನಿರ್ವಹಿಸಬೇಕಾದ ಎಲ್ಲಾ ಪ್ರಯೋಗಗಳನ್ನು ನಡೆಸುತ್ತಿದೆ. ಅದರಲ್ಲಿ ಅಳವಡಿಸಿದ್ದ ಎಲ್ಲಾ ಪೇಲೋಡ್‍ಗಳು ಸರಿಯಾಗಿ ಕೆಲಸ ಮಾಡುತ್ತಿವೆ. ಈ ಮೂಲಕ ಚಂದ್ರಯಾನ-2 ಶೇ.98ರಷ್ಟು ಯಶಸ್ವಿಯಾಗಿದೆ ಅಂತ ಹೇಳಿದ್ರು. ಅಲ್ಲದೆ ನಮ್ಮ ಮುಂದಿನ ಗುರಿ ಬಾಹ್ಯಾಕಾಶಕ್ಕೆ ಯಾತ್ರಿಗಳನ್ನು ಕಳುಹಿಸುವ ಗಗನಯಾನ ಎಂದಿದ್ದಾರೆ. ಅಲ್ಲದೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವಾಗ ಸಂಪರ್ಕ ಯಾಕೆ ಕಳೆದುಕೊಳ್ತು ಅನ್ನೋ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಉನ್ನತ ಮಟ್ಟದ ತಂಡ ಈ ಬಗ್ಗೆ ಅಧ್ಯಯನ ನಡೆಸುತ್ತಿದೆ ಅಂತ ಹೇಳಿದ್ದಾರೆ.

Contact Us for Advertisement

Leave a Reply