ಚಂದ್ರನ ಮಣ್ಣು ತರೋಕೆ ಇಸ್ರೋ ರೆಡಿ: ಇದು ಚಂದ್ರಯಾನ್‌-4ರ ಪ್ಲಾನ್‌

masthmagaa.com:

ಮಂಗಳವಾರ ಚಂದ್ರಯಾನ-3ರ ಪ್ರೊಪಲ್ಶನ್‌ ಮಾಡ್ಯೂಲ್(‌PM)ನ್ನ ಚಂದ್ರನ ಕಕ್ಷೆಯಿಂದ ಭೂಮಿಯ ಕಕ್ಷೆಗೆ ಸೇರಿಸಿದ ಬೆನ್ನಲ್ಲೇ ಇಸ್ರೋ ಮತ್ತೊಂದು ಗುಡ್‌ ನ್ಯೂಸ್‌ ನೀಡಿದೆ. ಯಶಸ್ವಿಯಾಗಿ PM ಭೂಮಿಯ ಕಕ್ಷೆಗೆ ಸೇರಿ ಮುಂದಿನ ಚಂದ್ರಯಾನ-4 ಮಿಷನ್‌ಗೆ ಹೊಸ ಭರವಸೆ ನೀಡಿದೆ. ಈಗ ಚಂದ್ರಯಾನ-4ರಲ್ಲಿ ಚಂದ್ರನ ಮೇಲಿಂದ ಲೂನಾರ್‌ ಸ್ಯಾಂಪಲ್ಸ್‌ ಅಥ್ವಾ ಅಲ್ಲಿನ ಮಣ್ಣು, ಕಲ್ಲು, ನೀರು, ಏನು ಸಿಕ್ಕುತ್ತೋ ಆ ಮಾದರಿಗಳನ್ನ ಕಲೆಕ್ಟ್‌ ಮಾಡೋ ವಿಚಾರವನ್ನ ಇಸ್ರೋ ಬಹಿರಂಗಪಡಿಸಿದೆ. ಹಾಗಂತ ಇಸ್ರೋ ಮುಖ್ಯಸ್ಥ ಎಸ್‌. ಸೋಮನಾಥ್‌ ಹೇಳಿದ್ದಾರೆ. ಇಸ್ರೋ ಈಗಾಗ್ಲೆ ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್‌ ಲ್ಯಾಂಡರ್‌ ಲ್ಯಾಂಡ್‌ ಆದ್ಮೇಲೆ ಮತ್ತೊಂದ್ಸಾರಿ ಜಂಪ್‌ ಮಾಡಿಸಿ ಕೆಲವು ಸೆಂಟಿಮೀಟರ್‌ಗಳಷ್ಟು ದೂರದಲ್ಲಿ ಲ್ಯಾಂಡ್‌ ಮಾಡಿಸಿತ್ತು. ಸೋ ಈಗ ಚಂದ್ರನ ಮೇಲೆ ಲ್ಯಾಂಡ್‌ ಮಾಡ್ಲಾಗೋ ಲ್ಯಾಂಡರನ್ನ ಮತ್ತೆ ಹಾರಿಸಿ ಚಂದ್ರನ ಸುತ್ತ ಕಕ್ಷೆಗೆ ಸೇರಿಸೋ ಶಕ್ತಿ ಇಸ್ರೋ ಬಳಿ ಇದೆ ಅಂತಾಯ್ತು. ಹೀಗಾಗಿ ಈಗ ಕಕ್ಷೆಗೆ ತಲುಪೋ ಲ್ಯಾಂಡರ್‌ನ್ನ ಅದನ್ನ ಮೊದಲು ಹೊತ್ತು ತಂದು ಸಪರೇಟ್‌ ಆಗಿದ್ದ PMಗೆ ವಾಪಸ್‌ ಕೂಡಿಸೋ ಪ್ರಯತ್ನಕ್ಕೆ ಇಸ್ರೋ ಕೈ ಹಾಕಲಿದೆ. ಈ Space Docking Experiment ಅಥ್ವಾ (SPADEX) ಟೆಕ್ನಾಲಜಿಯನ್ನ 2024ರಲ್ಲಿ ಪರೀಕ್ಷೆ ಮಾಡಲಾಗತ್ತೆ ಅಂತ ಸೋಮನಾಥ್‌ ಹೇಳಿದ್ದಾರೆ. ಅಲ್ಲದೆ ಇಸ್ರೋ ಈಗಾಗ್ಲೆ ಜಪಾನ್‌ ಸಹಯೋಗದಲ್ಲಿ ಚಂದ್ರಯಾನ-4 ಗೆ ಸಂಬಂಧಿಸಿದ Lunar Polar Exploration ಅಥ್ವಾ (Lupex) ಮಿಷನ್‌ನ ಕೆಲಸದಲ್ಲಿ ಭಾರತ ಸಕ್ರಿಯವಾಗಿದೆ.

-masthmagaa.com

Contact Us for Advertisement

Leave a Reply