ಓಷನ್‌ಸ್ಯಾಟ್‌ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೊ!

masthmagaa.com:

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಓಷ್ಯನ್‌ಸ್ಯಾಟ್‌- 3 ಸೇರಿದಂತೆ ಇತರ 8 ನ್ಯಾನೋ ಉಪಗ್ರಹಗಳನ್ನ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಲಾಂಚ್‌ ಬಳಿಕ ಓಷ್ಯನ್‌ಸ್ಯಾಟ್‌ ಯಶಸ್ವಿಯಾಗಿ ನಿರ್ಧರಿತ ಕಕ್ಷೆಗೆ ಸೇರಿದೆ ಅಂತ ನಾಸಾ ಹೇಳಿದೆ. ಅಂದ್ಹಾಗೆ ಶ್ರೀಹರಿಕೋಟಾದ ಸತೀಶ್‌ ಧವನ್‌ ಲಾಂಚ್‌ಪ್ಯಾಡ್‌ನಿಂದ ಉಪಗ್ರಹಗಳನ್ನ ಹೊತ್ತ PSLV-C54 ರಾಕೆಟ್ ಉಡಾವಣೆ ಆಗಿತ್ತು. ಇದ್ರಲ್ಲಿ ಓಷ್ಯನ್‌ಸ್ಯಾಟ್‌ ಹೊರತುಪಡಿಸಿ ಆನಂದ್‌, ಥೈಬೋಲ್ಟ್‌, INS2-B ಒಳಗೊಂಡ 8 ನ್ಯಾನೋ ಸ್ಯಾಟಲೈಟ್‌ಗಳಿವೆ. ಅಂದ್ಹಾಗೆ ಓಷ್ಯನ್‌ಸ್ಯಾಟ್‌ 1 ಉಪಗ್ರಹವನ್ನ 1999ರಲ್ಲಿ ಹಾಗೂ ಓಷ್ಯನ್‌ಸ್ಯಾಟ್‌ 2 ಅನ್ನ 2009ರಲ್ಲಿ ಉಡಾವಣೆ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply