masthmagaa.com:

ಇತ್ತೀಚೆಗಷ್ಟೇ ತೆರೆಕಂಡ ಪೊಗರು ಚಿತ್ರದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡುವಂತಹ ಕೆಲವೊಂದು ದೃಶ್ಯಗಳಿವೆ ಅಂತ ವಿವಾದ ಭುಗಿಲೆದ್ದಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತಿರೋ ಚಿತ್ರದ ನಿರ್ದೇಶಕ ನಂದಕಿಶೋರ್ ಬ್ರಾಹ್ಮಣ ಸಮುದಾಯದ ಕ್ಷಮೆ ಕೇಳಿದ್ದಾರೆ. ಅಲ್ಲದೆ ನಾಳೆಯೊಳಗೆ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕುವ, ಬ್ಲರ್ ಮಾಡುವ ಅಥವಾ ಏನು ಸಾಧ್ಯವೋ ಅದನ್ನ ಮಾಡೋ ಭರವಸೆ ಕೊಟ್ಟಿದ್ದಾರೆ.

ಮತ್ತೊಂದುಕಡೆ, ಹಿಂದೂ ಭಾವನೆಗಳಿಗೆ ಧಕ್ಕೆ ತರೋದು ಈಗ ಫ್ಯಾಷನ್ ಆಗಿಬಿಟ್ಟಿದೆ. ವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ ಹಾಕೋವರೆಗೆ ಪೊಗರು ಚಿತ್ರದ ಸ್ಕ್ರೀನಿಂಗ್ ಅನ್ನ ತಡೆ ಹಿಡಿಯಬೇಕು ಅಂತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ. ಜೊತೆಗೆ ಕ್ಷಮೆ ಕೇಳೋದು ಸಮಸ್ಯೆಗೆ ಪರಿಹಾರವಲ್ಲ. ಹಿಂದೂ ಧರ್ಮವನ್ನ ಹೀಗೆ ತೋರಿಸೋರಿಗೆ ಬೇರೆ ಧರ್ಮವನ್ನ ಕೂಡ ಹೀಗೆ ತೋರಿಸುವ ಧಮ್ ಇದೆಯಾ ಅಂತ ಪ್ರಶ್ನೆ ಮಾಡಿದ್ದಾರೆ.

https://twitter.com/ShobhaBJP/status/1364159215695130624

-masthmagaa.com

Contact Us for Advertisement

Leave a Reply