ಕೋವ್ಯಾಕ್ಸಿನ್​​ನಿಂದ ಅಡ್ಡಪರಿಣಾಮ ಆದ್ರೆ ಪರಿಹಾರ..!

masthmagaa.com:

ದೆಹಲಿ: ಭಾರತದಲ್ಲಿ 3ನೇ ಹಂತದ ಪ್ರಯೋಗದ ಹೊಸ್ತಿಲಲ್ಲಿದ್ದ ಭಾರತ್ ಬಯೋಟೆಕ್​ನ ಕೋವ್ಯಾಕ್ಸಿನ್ ಲಸಿಕೆಗೆ ಗ್ರೀನ್ ಸಿಗ್ನಲ್ ಕೊಟ್ಟಾಗ ಭಾರಿ ವಿರೋಧ ವ್ಯಕ್ತವಾಗಿತ್ತು. ಇದೀಗ ಭಾರತ್ ಬಯೋಟೆಕ್​​ನ ಲಸಿಕೆ ಹಾಕಿಸಿಕೊಳ್ಳುವವರ ಬಳಿ ಅನುಮತಿ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲಾಗುತ್ತಿದೆ. ಅದರಲ್ಲಿ ಕೋವ್ಯಾಕ್ಸಿನ್​​​​​ಗೆ ತುರ್ತು ಪರಿಸ್ಥಿತಿ ವೇಳೆ ನಿರ್ಬಂಧಿತ ಬಳಕೆಗೆ ಅನುಮತಿ ನೀಡಲಾಗಿದೆ.

ಆದ್ರೆ ಇನ್ನೂ ಕೂಡ ಕೋವ್ಯಾಕ್ಸಿನ್ 3ನೇ ಹಂತದ ಪ್ರಯೋಗ ಪೂರ್ಣಗೊಳಿಸಿಲ್ಲ. ಲಸಿಕೆಯ ಪ್ರಭಾವ ಎಷ್ಟಿದೆ ಅಂತಲೂ ಪ್ರಮಾಣೀಕರಿಸಬೇಕಿದೆ. ಹೀಗಾಗಿ ಲಸಿಕೆ ಪಡೆದ ಬಳಿಕವೂ ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಲಸಿಕೆ ಹಾಕಿಸಿಕೊಂಡ ಬಳಿಕ ಅಡ್ಡಪರಿಣಾಮಗಳು ಉಂಟಾದ್ರೆ ಚಿಕಿತ್ಸೆಯ ಜೊತೆಗೆ ಪರಿಹಾರ ನೀಡಲಾಗುತ್ತೆ ಹೇಳಲಾಗಿದೆ.

ಈ ನಡುವೆ ರಾಮಮನೋಹರ ಲೋಹಿಯಾ ಆಸ್ಪತ್ರೆ ವೈದ್ಯರು ನಮಗೆ ಕೋವಿಶೀಲ್ಡ್ ಲಸಿಕೆ ಬೇಕು. ಕೋವ್ಯಾಕ್ಸಿನ್ 3ನೇ ಹಂತದಲ್ಲಿರೋದ್ರಿಂದ ನಮಗೆ ಅದು ಬೇಡ ಅಂತ ಅಧೀಕ್ಷಕರ ಬಳಿ ಮನವಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply