ದಿಲ್ಲಿ ಜಾಮಿಯಾ ಮಸೀದಿಗೆ ಏಕಾಂಗಿ ಮಹಿಳೆಯರಿಗೆ ನೋ ಎಂಟ್ರಿ!

masthmagaa.com:

ಮಸೀದಿಗೆ ಮಹಿಳೆಯರು ಅಥ್ವಾ ಹುಡುಗಿಯರು ಏಕಾಂಗಿಯಾಗಿ ಬರುವಂತಿಲ್ಲ ಅಂತ ದಿಲ್ಲಿ ಜಾಮಿಯಾ ಮಸೀದಿಯ ಎಲ್ಲ ಪ್ರವೇಶ ದ್ವಾರಗಳ ಮೇಲೆ ಸೂಚನಾ ಫಲಕ ಹಾಕಲಾಗಿದೆ. ಇದರ ಬೆನ್ನಲ್ಲೇ ದಿಲ್ಲಿ ಮಹಿಳಾ ಆಯೋಗ ಮಸೀದಿಯ ಇಮಾಮ್‌ಗೆ ನೋಟಿಸ್‌ ನೀಡೋಕೆ ನಿರ್ಧರಿಸಿದೆ. ಇತ್ತ ದಿಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಮಸೀದಿಯ ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ ಜೊತೆ ಈ ಕುರಿತು ಮಾತುಕತೆ ನಡೆಸಿದ್ದಾರೆ. ಇದರ ಬೆನ್ನಲೇ ಈ ಆದೇಶವನ್ನ ಹಿಂಪಡೆಯೋದಾಗಿ ಬುಖಾರಿ ಹೇಳಿದ್ದಾರೆ. ಅಂದ್ಹಾಗೆ ಮುಸ್ಲಿಂ ಯುವತಿಯರು ತಮ್ಮ ಗೆಳೆಯರೊಂದಿಗೆ ಮಸೀದೆಗೆ ಬರ್ತಾರೆ ಅಂತ ದೂರುಗಳು ಕೇಳಿ ಬರ್ತಿವೆ. ಈ ಕಾರಣಕ್ಕಾಗಿ ಮಹಿಳೆಯರು ಅವರ ಕುಟುಂಬ ಅಥ್ವಾ ಪತಿಯೊಂದಿಗೆ ಬರಬೇಕು ಅಂತ ಹೇಳಲಾಗಿದೆ. ಆದರೆ ನಮಾಜ್‌ ಮಾಡಲು ಬರುವ ಮಹಿಳೆಯರನ್ನ ನಾವು ತಡೆಯಲ್ಲ ಅಂತ ಈ ಮೊದಲು ಬುಖಾರಿ ಹೇಳಿದ್ರು.

-masthmagaa.com

Contact Us for Advertisement

Leave a Reply