ಬಾಲಾಕೋಟ್​ನಲ್ಲಿ ಮತ್ತೆ ಉಗ್ರರಿಗೆ ಆತ್ಮಾಹುತಿ ದಾಳಿಗೆ ಟ್ರೈನಿಂಗ್​​

ದೆಹಲಿ: ಪುಲ್ವಾಮಾ ದಾಳಿ ಬಳಿಕ ಭಾರತದ ವಾಯುಸೇನೆ ಪಾಕಿಸ್ತಾನದ ಒಳಗೆ ನುಗ್ಗಿ ಬಾಲಾಕೋಟ್​ನಲ್ಲಿ ಅಡಗಿದ್ದ ಉಗ್ರರ ಮಾರಣ ಹೋಮ ಮಾಡಿತ್ತು. ಆದ್ರೆ ಈಗ ಉಗ್ರರು ಪುನಃ ಚಿಗುರಿಕೊಂಡಿದ್ದಾರೆ. ಪುನಃ ಬಾಲಾಕೋಟ್​ನಲ್ಲಿ ಠಿಕಾಣಿ ಹೂಡಿರುವ ಉಗ್ರರು  ಟ್ರೈನಿಂಗ್ ಪಡೆಯುತ್ತಿದ್ದಾರೆ. ಒಟ್ಟು 45ರಿಂದ 50 ಮಂದಿ ಉಗ್ರರಿಗೆ ಆತ್ಮಾಹುತಿ ದಾಳಿಯ ಟ್ರೈನಿಂಗ್ ನೀಡಲಾಗುತ್ತಿದೆ ಎಂದು ಹೇಳಲಾಗ್ತಿದೆ. ಸೂಕ್ತ ಸಮಯ ನೋಡಿಕೊಂಡು ದೇಶದ ಗಡಿ ನುಸುಳಲು ಉಗ್ರರು ಕಾದು ಕುಳಿತಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಇನ್ನು ಈ ಹಿಂದಷ್ಟೇ ಗಡಿಯಲ್ಲಿ 500 ಮಂದಿ ಉಗ್ರರು ಗಡಿ ನುಸುಳಲು ಕಾದು ಕುಳಿತಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿತ್ತು. ಇದ್ರ ಬೆನ್ನಲ್ಲೇ ಗಡಿ ನಿಯಂತ್ರಣ ರೇಖೆ ಬಳಿ ಸೇನಾ ಬಲವನ್ನು ಹೆಚ್ಚಿಸಲಾಗಿದೆ. ಜೊತೆಗೆ ಉಗ್ರರ ವಿರುದ್ಧ ಹೋರಾಡಲು ಯೋಧರಿಗೆ ಎಲ್ಲಾ ರೀತಿಯ ಸ್ವಾತಂತ್ರ್ಯ ನೀಡಲಾಗಿದೆ. ಇಂದು ಬೆಳಗ್ಗೆಯಷ್ಟೇ ಇಬ್ಬರು ಲಷ್ಕರ್ ಉಗ್ರರನ್ನು ಬಂಧಿಸುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿತ್ತು.

Contact Us for Advertisement

Leave a Reply