ಯಡಿಯೂರಪ್ಪ ಬಗ್ಗೆ ಕೆಟ್ಟದಾಗಿ ಮಾತಾಡಿದ ಜಮೀರ್..!

ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ನಾಲಗೆ ಹರಿಬಿಟ್ಟಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಯಾವ ಮುಸ್ಲಿಮರೂ ಸಿಎಂ ಯಡಿಯೂರಪ್ಪರನ್ನ ನಂಬಬೇಡಿ. ಮುಸ್ಲಿಂ ಮತಗಳನ್ನು ಪಡೆಯುವ ಉದ್ದೇಶದಿಂದ ಕೆಜೆಪಿ ಪಕ್ಷ ಮಾಡಿ ಟಿಪ್ಪು ಜಯಂತಿ ಮಾಡಿದ್ರು. ಅಂದು ಪೇಟಾ ಹಾಕಿ ಖತ್ತಿ ಹಿಡಿದು ನಿಂತಾಗ ಟಿಪ್ಪು ಬೇಕಿದ್ದ. ಆದ್ರೆ ಇವತ್ತು ಬೇಡ್ವಾ ಎಂದು ಪ್ರಶ್ನಿಸಿದ್ರು. ಜೊತೆಗೆ ನಾವು ಯಾವತ್ತೂ ರಾಮ ಮಂದಿರ ಕಟ್ಟೋದು ಬೇಡ ಅಂತ ಹೇಳಿಲ್ಲ. ಮಸೀದಿಯೂ ಇರಲಿ, ಮಂದಿರವೂ ಇರಲಿ. ಆದ್ರೆ ಬಿಜೆಪಿಯವ್ರು ಬಾಬರಿ ಮಸೀದಿ ವಿಚಾರದಲ್ಲೂ ರಾಜಕೀಯ ಮಾಡ್ತಿದ್ದಾರೆ. ಯಡಿಯೂರಪ್ಪ ಪ್ಯಾಂಟ್ ಒಳಗೆ ಚಡ್ಡಿ ಇದೆ, ಬೇಕಿದ್ರೆ ಕಾರ್ಯಕ್ರಮ ಮುಗಿದ ಬಳಿಕ ಸೈಡಿಗೆ ಕರೆದೊಯ್ದು ಪ್ಯಾಂಟ್ ಬಿಚ್ಚಿ ನೋಡಿ ಅಂತ ಕೆಟ್ಟದಾಗಿ ಮಾತನಾಡಿದ್ದಾರೆ.

Contact Us for Advertisement

Leave a Reply