ಜಮ್ಮು ಕಾಶ್ಮೀರಕ್ಕೆ ಪ್ರವಾಸಿಗರು ಬರಬಹುದು..! ಆದ್ರೆ ಇಂಟರ್ನೆಟ್ ಇಲ್ಲ..!

ಜಮ್ಮು ಕಾಶ್ಮೀರದಲ್ಲಿ 370 ವಿಧಿ ರದ್ದತಿ ವೇಳೆ ವಿಧಸಲಾಗಿದ್ದ ನಿರ್ಬಂಧಗಳನ್ನು ಒಂದೊಂದಾಗೇ ಸಡಿಲಿಸಲಾಗುತ್ತಿದೆ. ಅದೇ ರೀತಿ 2 ತಿಂಗಳ ಬಳಿಕ ಜಮ್ಮು ಕಾಶ್ಮೀರಕ್ಕೆ ಪ್ರವಾಸಿಗರು ತೆರಳಲು ಅನುಮತಿ ನೀಡಲಾಗಿದೆ. 370ನೇ ವಿಧಿಯನ್ನು ರದ್ದುಪಡಿಸುವ ಮುನ್ನ ಭದ್ರತಾ ದೃಷ್ಟಿಯಿಂದ ಪ್ರವಾಸಿಗರು ಜಮ್ಮು ಕಾಶ್ಮೀರ ಬಿಟ್ಟು ತೆರಳುವಂತೆ ಮನವಿ ಮಾಡಲಾಗಿತ್ತು. ಅಲ್ಲದೆ ಹೊರಗಿನಿಂದ ಬರುವ ಪ್ರವಾಸಿಗರಿಗೂ ನಿರ್ಬಂಧ ಹೇರಲಾಗಿತ್ತು. ಇದ್ರಿಂದ ಸಾವಿರಾರು ಪ್ರವಾಸಿಗರು, ಯಾತ್ರಿಕರು, ನೌಕರರು ಮತ್ತು ಹೊರರಾಜ್ಯದ ವಿದ್ಯಾರ್ಥಿಗಳು ಜಮ್ಮು ಕಾಶ್ಮೀರದಿಂದ ಹೊರನಡೆದಿದ್ದರು.

ಅಕ್ಟೋಬರ್ 9ರಂದು ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಆದೇಶದಂತೆ ಗೃಹ ಇಲಾಖೆ ಪ್ರವಾಸಿಗರ ಮೇಲೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಿತ್ತು.

ಆದ್ರೆ ಜಮ್ಮು ಕಾಶ್ಮೀರದಲ್ಲಿ ವಾಹನ ಸಂಚಾರ ಸಹಜ ಸ್ಥಿತಿಗೆ ಬಂದಿಲ್ಲ. ಅಂಗಡಿ ಮುಂಗಟ್ಟುಗಳು ಓಪನ್ ಆಗಿಲ್ಲ. ಹೀಗಿರುವಾಗ ಪ್ರವಾಸಿಗರು ಜಮ್ಮು ಕಾಶ್ಮೀರಕ್ಕೆ ತೆರಳಿ ಏನು ಮಾಡ್ತಾರೆ ಅನ್ನೊದು ಪ್ರಶ್ನೆಯಾಗಿದೆ. ಇನ್ನೊಂದು ವಿಷ್ಯ ಅಂದ್ರೆ ಇಲ್ಲಿ ಇನ್ನೂ ಇಂಟರ್ನೆಟ್ ಮೇಲಿನ ನಿರ್ಬಂಧ ಕೂಡ ತೆರವಾಗಿಲ್ಲ. ಶಾಲಾ ಕಾಲೇಜುಗಳು ತೆರೆದಿದ್ದು, ಶಿಕ್ಷಕರು ಬರುತ್ತಿದ್ದರೂ ಕೂಡ ಇನ್ನೂ ಮಕ್ಕಳು ಶಾಲೆಯತ್ತ ಮುಖ ಮಾಡುತ್ತಿಲ್ಲ.

Contact Us for Advertisement

Leave a Reply