40 ಕೆಜಿ RDX ಪತ್ತೆ..! ಪುಲ್ವಾಮಾ ಮಾದರಿ ದಾಳಿಗೆ ಸಂಚು..!

ಜಮ್ಮು ಕಾಶ್ಮೀರದಲ್ಲಿ ಶಾಂತಿ ವ್ಯವಸ್ಥೆ ಕಾಪಾಡಲು ಸೇನೆಯ ಕಾರ್ಯಾಚರಣೆ ನಡೆಯುತ್ತಿದೆ. ಇದೇ ರೀತಿ ಆಪರೇಷನ್ ವೇಳೆ ಕಥುವಾ ಜಿಲ್ಲೆಯ ಬಿಲಾವರ್‍ನಲ್ಲಿ 40 ಕೆಜಿ RDX ಪತ್ತೆಹಚ್ಚಲಾಗಿದೆ. ಜಮ್ಮು ಕಾಶ್ಮೀರ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಗ್ರಾಮದ ಒಂದು ಮನೆಯಲ್ಲಿ RDX ಪತ್ತೆಯಾಗಿದೆ. ಈ ಆರ್‍ಡಿಎಕ್ಸ್ ಸ್ಯಾಂಪಲ್‍ನ್ನು ಪೊಲೀಸರು ತನಿಖೆಗೆ ಕಳುಹಿಸಿದ್ದಾರೆ. ಜಮ್ಮು ಕಾಶ್ಮೀರಕ್ಕೆ 370ನೇ ವಿಧಿಯನ್ವಯ ನೀಡಿದ್ದ ವಿಶೇಷ ಸವಲತ್ತು ರದ್ದುಪಡಿಸಿದ ಬಳಿಕ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಸ್ಫೋಟಕ RDX ಪತ್ತೆಯಾಗಿದೆ. ಇವುಗಳ ಮೂಲಕ ಭಾರಿ ದೊಡ್ಡ ಸ್ಫೋಟಕ್ಕೆ ಸಂಚು ನಡೆದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಪುಲ್ವಾಮಾ ದಾಳಿ ನಡೆದಾಗ ಉಗ್ರರು ಭಾರಿ ಪ್ರಮಾಣದಲ್ಲಿ ಇದೇ ಸ್ಫೋಟಕ ಬಳಸಿದ್ದರು. ಇಷ್ಟೊಂದು ಪ್ರಮಾಣದಲ್ಲಿ ಆರ್‍ಡಿಎಕ್ಸ್ ಉಗ್ರರ ಕೈ ಸೇರಿದ್ದು ಹೇಗೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು.

Contact Us for Advertisement

Leave a Reply