ಬಿಡುಗಡೆಯಾಗುತ್ತಿದ್ದಂತೆ ಜಮ್ಮು ಕಾಶ್ಮೀರ ನಾಯಕರ ಸಭೆ..!

ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸಿದ ಬಳಿಕ ಹೇರಲಾಗಿದ್ದ ಎಲ್ಲಾ ನಿರ್ಬಂಧಗಳನ್ನು ಒಂದೊಂದಾಗೇ ತೆಗೆಯಲಾಗುತ್ತಿದೆ. ಇಂದಿನಿಂದ ಎಲ್ಲಾ ಶಾಲಾ- ಕಾಲೇಜುಗಳು ಪುನಾರಂಭವಾಗಿದೆ. ಜೊತೆಗೆ ಭದ್ರತೆಯನ್ನೂ ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಇನ್ನು ನಿನ್ನೆ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಹಲವು ನಾಯಕರನ್ನು ಬಿಡುಗಡೆ ಮಾಡಲಾಗಿತ್ತು. ಇದ್ರ ಬೆನ್ನಲ್ಲೇ ಸಭೆ ನಡೆಸಿದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕರು ಮುಂಬರುವ ಬ್ಲಾಕ್ ಡೆವೆಲಪ್‍ಮೆಂಟ್ ಕೌನ್ಸಿಲ್ ಚುನಾವಣೆ ಬಗ್ಗೆ ಸಭೆ ನಡೆಸಿದ್ರು.

ನಿನ್ನೆ ಜಮ್ಮುವಿನಲ್ಲಿ ಬಂಧಿಯಾಗಿದ್ದ ರಾಜಕೀಯ ನಾಯಕರನ್ನು ಬಿಡುಗಡೆ ಮಾಡಲಾಗಿದೆ. ಆದ್ರೆ ಕಾಶ್ಮೀರ ಕಣಿವೆಯಲ್ಲಿನ ರಾಜಕೀಯ ನಾಯಕರು ಇನ್ನೂ ಕೂಡ ಬಂಧಿಯಾಗಿದ್ದಾರೆ. ಇವರ ಪೈಕಿ ಜಮ್ಮು ಕಾಶ್ಮೀರ ಮಾಜಿ ಸಿಎಂ ಉಮರ್ ಅಬ್ದುಲ್ಲಾ, ಮೆಹಬೂಬ ಮುಫ್ತಿ, ಫಾರೂಖ್ ಅಬ್ದುಲ್ಲಾರಂಥಹ ಪ್ರಮುಖ ನಾಯಕರು ಸೇರಿದ್ದಾರೆ.

Contact Us for Advertisement

Leave a Reply