ನಾಸಾಗೆ ಜೆಫ್‌ ಬೆಜೋಸ್‌ ಕೊಟ್ಟ ಆಫರ್‌ ಏನು?

masthmagaa.com:

ಜಗತ್ತಿನ ಅತಿ ಶ್ರೀಮಂತರ ನಡುವೆ ಈಗ ದುಡ್ಡಿನ ರೇಸ್ ಬದಲಾಗಿ, ಬಾಹ್ಯಾಕಾಶದ ರೇಸ್ ಜೋರಾಗಿದೆ. ಇತ್ತೀಚೆಗಷ್ಟೇ ಗುರುಗ್ರಹದ ಚಂದ್ರ ಯೂರೋಪಾ ಮಿಷನ್​​ಗೆ ನಾಸಾ, ಎಲಾನ್ ಮಸ್ಕ್​​ರ ಸ್ಪೇಸ್​ ಎಕ್ಸ್​​ನ ರಾಕೆಟ್​​​ ಬಳಸೋದಾಗಿಯೂ ತಿಳಿಸಿತ್ತು. ಇದಕ್ಕೂ ಮುನ್ನ ಮೂನ್​ ಲ್ಯಾಂಡರ್​​ ಕಾಂಟ್ರ್ಯಾಕ್ಟ್​ ಕೂಡ ಎಲಾನ್​ ಮಸ್ಕ್​​​​​​ ಬಡಿದು ಬಾಯಿಗ್ ಹಾಕ್ಕೊಂಡಿದ್ರು. ಇದೀಗ ಬ್ಲೂ ಒರಿಜಿನ್ ಸಂಸ್ಥೆಯ ಜೆಫ್ ಬೆಜೋಸ್ ನಾಸಾಗೆ ಓಪನ್ ಲೆಟರ್ ಬರೆದಿದ್ದಾರೆ. ನಮ್ಮ ಕಂಪನಿಗೆ ಮೂನ್ ಲ್ಯಾಂಡರ್ ಅಭಿವೃದ್ಧಿಪಡಿಸಲು ಅವಕಾಶ ಕೊಟ್ರೆ 200 ಕೋಟಿ ಡಾಲರ್​​ ಡಿಸ್ಕೌಂಟ್ ಕೊಡ್ತೀವಿ ಅಂತ ಗೋಷಿಸಿದ್ದಾರೆ. 200 ಕೋಟಿ ಡಾಲರ್ ಅಂದ್ರೆ ರೂಪಾಯಿ ಲೆಕ್ಕದಲ್ಲಿ 14,800 ಕೋಟಿ ರೂಪಾಯಿಯಾಗುತ್ತೆ. ಇದ್ರ ಜೊತೆಗೆ ಲ್ಯಾಂಡರ್​ನ ಪರೀಕ್ಷಾ ವೆಚ್ಚವನ್ನು ಕೂಡ ನಾವೇ ಭರಿಸ್ತೀವಿ ಅಂತ ಬೆಜೋಸ್ ಆಫರ್ ಕೊಟ್ಟಿದ್ದಾರೆ. ಅಂದಹಾಗೆ ನಾಸಾ 2024ರಲ್ಲಿ ಮತ್ತೆ ಚಂದ್ರನ ಮೇಲೆ ಮನುಷ್ಯರನ್ನು ಇಳಿಸಲು ಮತ್ತು 2030ರ ವೇಳೆಗೆ ಮಂಗಳನ ಮೇಲೆ ಮಾನವರನ್ನು ಇಳಿಸೋ ಗುರಿಯನ್ನು ಇಟ್ಕೊಂಡು ಕೆಲಸ ಮಾಡ್ತಿದೆ. ಅದರಂತೆ ಚಂದ್ರಯಾನಕ್ಕೆ ಅಗತ್ಯವಾದ ಮೂನ್ ಲ್ಯಾಂಡರ್ ಅಂದ್ರೆ ಚಂದ್ರನ ಮೇಲೆ ಇಳಿಯೋ ಲ್ಯಾಂಡರ್​​​​​​​​ಗಾಗಿ ಸ್ಪೇಸ್​ ಎಕ್ಸ್​​​​​​​ ಜೊತೆಗೆ 290 ಕೋಟಿ ಡಾಲರ್​ ಮೊತ್ತದ ಒಪ್ಪಂದ ಮಾಡ್ಕೊಂಡಿತ್ತು ನಾಸಾ. ಆದ್ರೀಗ ಅದನ್ನು 200 ಕೋಟಿ ಡಾಲರ್ ಡಿಸ್ಕೌಂಟ್​ನಲ್ಲಿ ಅಂದ್ರೆ 90 ಕೋಟಿಯಲ್ಲಿ ಮಾಡ್ಕೊಡ್ತೀವಿ ಅಂತ ಬ್ಲೂ ಒರಿಜಿನ್ ಸಂಸ್ಥೆಯ ಜೆಫ್ ಬೆಜೋಸ್ ಘೋಷಿಸಿದ್ದಾರೆ.

-masthmagaa.com

Contact Us for Advertisement

Leave a Reply