ಅಮೆಜಾನ್ ಕ್ಲಿಕ್ ಆಗಲ್ಲ ಎಂದಿದ್ದ ಆರ್ಟಿಕಲ್ ಶೇರ್ ಮಾಡಿದ ಜೆಫ್ ಬೆಜೋಸ್ ?

masthmagaa.com:

ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್​ ಹಳೆಯ ನ್ಯೂಸ್ ಪೇಪರ್ ಒಂದರ ಆರ್ಟಿಕಲ್​​​ನ್ನು ಟ್ವೀಟ್ ಮಾಡಿದ್ದಾರೆ. 1999ರ ಬ್ಯಾರೋನ್ಸ್ ಅನ್ನೋ ನ್ಯೂಸ್​ಪೇಪರ್​ನ ಆರ್ಟಿಕಲ್ ಇದಾಗಿದೆ. ಇದ್ರಲ್ಲಿ ಅಮೆಜಾನ್.ಬಾಂಬ್ ಅಂತ ಟೈಟಲ್ ಕೊಡಲಾಗಿದೆ ಅಂದ್ರೆ ಜೆಫ್ ಬೆಜೋಸ್​​ರ ಐಡಿಯಾ ಉಳಿಯಲ್ಲ.. ಹೊಟ್ಟಿ ಹಾರಿಹೋಗುತ್ತೆ ಅನ್ನೋ ಅರ್ಥದಲ್ಲಿ ಈ ಆರ್ಟಿಕಲ್ ಪ್ರಕಟಿಸಲಾಗಿತ್ತು.. ಅಮೆಜಾನ್​​ನ ಶೇರು ಬೆಲೆ ಕುಸಿದು ಹೋಗುತ್ತೆ. ಯಾಕಂದ್ರೆ ಆನ್​ಲೈನ್​​ನಲ್ಲಿ ತಮ್ಮ ವಸ್ತುಗಳನ್ನು ತಾವೇ ಮಾರೋರು ಮಾತ್ರ ನಿಜವಾದ ವಿನ್ನರ್​​ಗಳು.. ಜೆಫ್ ಬೆಜೋಸ್ ಇಲ್ಲಿ ಜಸ್ಟ್​ ಮದ್ಯವರ್ತಿ ರೀತಿ ಅಷ್ಟೆ.. ಜೆಫ್ ಬೆಜೋಸ್​ ಹೊಸ ಮಾದರಿಯ ವ್ಯಾಪಾರದ ಪ್ಲಾನ್ ತುಂಬಾ ಸಿಲ್ಲಿಯಾಗಿದೆ ಅಂತ ಟೀಕಿಸಲಾಗಿತ್ತು. ಆದ್ರೆ ಈಗ ಈ ಪತ್ರಿಕೆ ಬಂದು 22 ವರ್ಷ ಕಳೆದು ಹೋಗಿದೆ. ಈಗ ಜೆಫ್ ಬೆಜೋಸ್​ ಸ್ಥಾಪಿಸಿದ್ದ ಅದೇ ಅಮೆಜಾನ್ ಸಂಸ್ಥೆ 1.6 ಲಕ್ಷ ಕೋಟಿ ಡಾಲರ್​ ಮೊತ್ತದ ಸಂಸ್ಥೆಯಾಗಿದೆ. ಜೆಫ್ ಬೆಜೋಸ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸಾಲಲ್ಲಿ ಬರ್ತಾರೆ. ಈ ಆರ್ಟಿಕಲ್​ನ್ನು ಟ್ವಿಟ್ಟರ್​ನಲ್ಲಿ ಶೇರ್ ಮಾಡಿರೋ ಜೆಫ್ ಬೆಜೋಸ್​, ಎಲ್ಲರ ಮಾತನ್ನು ಕೇಳಿ.. ಆದ್ರೆ ನೀವು ಯಾರು ಅಂತ ಹೇಳಲು ಬೇರೆಯವರಿಗೆ ಬಿಡಬೇಡಿ.. ಅಮೆಜಾನ್ ಫೇಲ್ ಆಗುತ್ತೆ ಅಂತ ಊಹಿಸಿದ ಕಥೆಗಳಲ್ಲಿ ಇದು ಕೂಡ ಒಂದು. ಆದ್ರೆ ವಿಶ್ವದ ಅತ್ಯಂತ ಯಶಸ್ವಿ ಕಂಪನಿಗಳಲ್ಲಿ ಅಮೆಜಾನ್ ಕೂಡ ಒಂದಾಗಿದೆ ಅಂತ ಬರೆದುಕೊಂಡಿದ್ದಾರೆ. ಅದಕ್ಕೆ ಸ್ಪೇಸ್ ಎಕ್ಸ್ ಸಂಸ್ಥೆಯ ಮುಖ್ಯಸ್ಥ ಎಲಾನ್ ಮಸ್ಕ್​ 2 ಅಂತ ಬರೆದಿರೋ ಸಿಲ್ವರ್ ಮೆಡಲ್ ಎಮೋಜಿ ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಎಲಾನ್ ಮಸ್ಕ್​ ವಿಶ್ವದ ನಂಬರ್ 1 ಶ್ರೀಮಂತ ಆದಾಗ, ನಾನು 2ನೇ ಸ್ಥಾನದಲ್ಲಿರೋ ಜೆಫ್ ಬೆಜೋಸ್​​ಗೆ ದೊಡ್ಡ 2 ಅನ್ನೋ ಅಂಕಿ ಜೊತೆಗೆ ಸಿಲ್ವರ್ ಮೆಡಲ್ ಕಳುಹಿಸ್ತೀನಿ ಅಂತ ಫೋರ್ಬ್ಸ್​​​ಗೆ ಇ-ಮೇಲ್ ಮಾಡಿದ್ರು. ಈಗ ಸಿಲ್ವರ್ ಮೆಡಲ್ ಟ್ವೀಟ್ ಮಾಡಿ ಅದೇ ರೀತಿ ಕಿಚಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply