ಜಮ್ಮು ಕಾಶ್ಮಿರದಲ್ಲಿ ಉಗ್ರರ ವಿರುದ್ಧ ಎನ್ ಕೌಂಟರ್: ಕೈಜಾರಿದ ಉಗ್ರ!

masthmagaa.com:

ಜಮ್ಮು ಕಾಶ್ಮಿರದ ಪೂಂಚ್ ಜಿಲ್ಲೆಯ ಭಾಟಾ ಡೂರಿಯನ್ ಅರಣ್ಯ ಪ್ರದೇಶದಲ್ಲಿ ಉಗ್ರರ ವಿರುದ್ಧ ಎನ್ ಕೌಂಟರ್ ಮುಂದುವರಿದಿದೆ. ಕಾಡಿನಿಂದ ನಿರಂತರ ಗುಂಡಿನ ಮೊರೆ ಕೇಳಿಬರ್ತಿದೆ. ಈ ಕಾರ್ಯಾಚರಣೆ ವೇಳೆ ಗಂಭೀರ ಘಟನೆಗಳು ಆಗಿವೆ. ಯೋಧರು ಹಾಗೂ ಪೊಲಿಸರ ಜಂಟಿ ಟೀಮ್ ಕಾಡಲ್ಲಿ ಹುಡುಕಾಡ್ತಿದ್ದಾಗ ಒಂದು ಉಗ್ರರ ಅಡಗು ತಾಣ ಕಾಣಿಸಿದೆ. ಇದನ್ನ ಐಡೆಂಟಿಫೈ ಮಾಡೋಕೆ ಅಂತ ಬಂಧಿತ ಪಾಕಿಸ್ತಾನಿ ಲಷ್ಕರ್ ಉಗ್ರ ಜಿಯಾ ಮುಸ್ತಾಫಾನನ್ನ ಅಲ್ಲಿಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಉಗ್ರರು ಹೆವಿ ಫೈರಿಂಗ್ ಮಾಡಿದ ಪರಿಣಾಮ ನಮ್ಮ ಇಬ್ಬರು ಪೊಲೀಸರು ಹಾಗೂ ಒಬ್ಬ ಯೋಧ ಗಾಯಗೊಂಡಿದ್ದಾರೆ. ಇವ್ರು ಕರ್ಕೊಂಡೋಗಿದ್ದ ಉಗ್ರ ಜಿಯಾ ಮುಸ್ತಾಫಾನಿಗೂ ಗಾಯ ಆಯ್ತು. ಆದ್ರೆ ಆತನನ್ನ ಅಲ್ಲಿಂದ ಹೊರಗೆ ಎಳೆತರಲು ಸಾಧ್ಯ ಆಗಲಿಲ್ಲ ಅಂತ ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ. ಹಾಗಾದ್ರೆ ಉಗ್ರನನ್ನ ಪುಗಸಟ್ಟೆಯಾಗಿ ಉಗ್ರರ ಕೈಗೆ ಬಿಟ್ಟುಕೊಂಟಂತಾಯ್ತಾ? ಅಥವಾ ಆತ ಗುಂಡೇಟು ತಿಂದು ಮೃತಪಟ್ಟನಾ ಅನ್ನೋ ಪ್ರಶ್ನೆಗಳು ಈಗ ಎದ್ದಿವೆ.
ಇನ್ನು ಜಮ್ಮು ಕಾಶ್ಮಿರದ ಶೋಪಿಯಾನ್ ನಲ್ಲೂ ಒಂದು ಚಕಮಕಿ ಆಗಿದೆ. ಬಾಬಾಪೋರಾದಲ್ಲಿ CRPF ಯೋಧರ ಮೇಲೆ ಉಗ್ರರು ದಾಳಿ ಮಾಡಿದ್ರು. ಆಗ CRPF ಪ್ರತಿದಾಳಿಯಲ್ಲಿ ಒಬ್ಬ ಗುರುತು ಪತ್ತೆಯಾಗದ ವ್ಯಕ್ತಿಯನ್ನ ಹೊಡೆದುರುಳಿಸಲಾಗಿದೆ ಅಂತ ಕಾಶ್ಮಿರ ಪೊಲೀಸರು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply