ಸಹಜ ಸ್ಥಿತಿಯತ್ತ ಭೂಮಿ ಮೇಲಿನ ಸ್ವರ್ಗ..ಕಾಶ್ಮೀರಕ್ಕೆ ಪ್ರವಾಸಿಗರು ಹೋಗಬಹುದು..

ಪ್ರವಾಸಿಗರು ಅಕ್ಟೋಬರ್ 10ರ ಬಳಿಕ ಕಾಶ್ಮೀರಕ್ಕೆ ಬರಬಹುದು ಎಂದು ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ತಿಳಿಸಿದ್ದಾರೆ. ಕಳೆದ ಆಗಸ್ಟ್ 2ರಂದು ಭದ್ರತೆಯ ಕಾರಣ ನೀಡಿ ಎಲ್ಲಾ ಪ್ರವಾಸಿಗರು ಜಮ್ಮು ಕಾಶ್ಮೀರ ತೊರೆಯಬೇಕು ಎಂದು ಆದೇಶಿಸಲಾಗಿತ್ತು. ನಂತರದಲ್ಲಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸವಲತ್ತು ಕಲ್ಪಿಸಿದ್ದ 370ನೇ ವಿಧಿಯನ್ನು ರದ್ದುಗೊಳಿಸಲಾಗಿತ್ತು. ಹೀಗಾಗಿ ಜಮ್ಮು ಕಾಶ್ಮೀರಕ್ಕೆ ಪ್ರವಾಸಿಗರನ್ನು ನಿರ್ಬಂಧಿಸಲಾಗಿತ್ತು. ಈಗ ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳಿದ್ದು ಪ್ರವಾಸಿಗರು ಕಾಶ್ಮೀರಕ್ಕೆ ಪ್ರವಾಸ ಕೈಗೊಳ್ಳಬಹುದು ಎಂದು ರಾಜ್ಯಪಾಲರು ತಿಳಿಸಿದ್ದಾರೆ. ಸಲಹೆಗಾರರು ಮತ್ತು ಮುಖ್ಯಕಾರ್ಯದರ್ಶಿ ಜೊತೆಗಿನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇನ್ನು ಅಕ್ಟೋಬರ್ 24ರಂದು ಬ್ಲಾಕ್ ಡೆವಲಪ್‍ಮೆಂಟ್ ಕೌನ್ಸಿಲ್ ಚುನಾವಣೆ ನಡೆಸಲು ನಿರ್ಧರಿಲಾಗಿದೆ. ಆದ್ರೆ ಇನ್ನೂ ಹಲವಾರು ಪಕ್ಷಗಳ ನಾಯಕರು ಜೈಲಿನಲ್ಲೇ ಇದ್ದಾರೆ. ಹೀಗಾಗಿ ಚುನಾವಣೆ ಸಿದ್ಧತೆ, ಅಭ್ಯರ್ಥಿ ಆಯ್ಕೆ ಸಂಬಂಧ ಚರ್ಚಿಸಲು ಪಕ್ಷಗಳ ನಾಯಕರನ್ನು ಭೇಟಿಯಾಗಲು ನಿಯೋಗಗಳಿಗೆ ಅವಕಾಶ ನೀಡಲಾಗಿದೆ.

Contact Us for Advertisement

Leave a Reply