masthmagaa.com:

ಭಾರತದ ಬಳಿಕ ಇದೀಗ ಅಮೆರಿಕದಲ್ಲೂ ಕೊರೋನಾ ಲಸಿಕೆ ಅನ್ನೋದು ಚುನಾವಣಾ ಅಸ್ತ್ರವಾಗಿ ಬದಲಾಗಿದೆ. ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡೆನ್,‌ ತನ್ನನ್ನು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ರೆ ಇಡೀ ದೇಶದ ಜನತೆಗೆ ಉಚಿತ ಕೊರೋನಾ ಲಸಿಕೆ ಕೊಡ್ತೀವಿ ಅಂತ ಬಹುದೊಡ್ಡ ಆಶ್ವಾಸನೆ ನೀಡಿದ್ದಾರೆ. ಸುರಕ್ಷಿತ ಹಾಗೂ ಪರಿಣಾಮಕಾರಿ ಲಸಿಕೆ ಲಭ್ಯವಾದಲ್ಲಿ ಪ್ರತಿಯೊಬ್ಬರಿಗೂ ಅದನ್ನು ಫ್ರೀಯಾಗಿ ನೀಡ್ತೀವಿ ಎಂದಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೇವಲ 10 ದಿನ ಇರುವಾಗಲೇ ಜೋ ಬೈಡನ್​ ಅವರ ಈ ಘೋಷಣೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಈಗಾಗಲೇ ಕೊರೋನಾ ಆರ್ಭಟಕ್ಕೆ ನಲುಗಿರುವ ಅಮೆರಿಕದಲ್ಲಿ 84 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, 2.23 ಲಕ್ಷಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಜೊತೆಗೆ ಕೊರೋನಾ ನಿರ್ವಹಣೆಯಲ್ಲಿ ಡೊನಾಲ್ಡ್​ ಟ್ರಂಪ್ ವಿಫಲರಾಗಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿದೆ. ಇಂತಹ ಸಂದರ್ಭದಲ್ಲೇ ಎದುರಾಳಿ ಅಭ್ಯರ್ಥಿ ಉಚಿತ ಲಸಿಕೆ ಬಗ್ಗೆ ಘೋಷಣೆ ಮಾಡಿರೋದು ಟ್ರಂಪ್​ಗೆ ಹಿನ್ನಡೆ ಉಂಟುಮಾಡುವ ಸಾಧ್ಯತೆ ಇದೆ.

ಮೊನ್ನೆಯಷ್ಟೇ ಬಿಹಾರದಲ್ಲಿರುವ ಎಲ್ಲರಿಗೂ ಉಚಿತ ಕೊರೋನಾ ಲಸಿಕೆ ನೀಡೋದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ನಂತದ ತಮಿಳುನಾಡು, ಮಧ್ಯಪ್ರದೇಶದಲ್ಲೂ ಇಂತಹದ್ದೇ ಆಶ್ವಾಸನೆಯನ್ನ ಆಡಳಿತಪಕ್ಷಗಳು ನೀಡಿದ್ದವು. ಇದೀಗ ಅಮೆರಿಕದಲ್ಲೂ ಕೊರೊನಾ ಲಸಿಕೆ ವಿಚಾರ ಚುನಾವಣಾ ಅಸ್ತ್ರವಾಗಿ ಮಾರ್ಪಟ್ಟಿದೆ.

-masthmagaa.com

Contact Us for Advertisement

Leave a Reply