masthmagaa.com:

ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಡ್ರಗ್ಸ್​ ವಿಚಾರಕ್ಕೆ ಸಂಬಂಧಿಸಿದಂತೆ ನಾರ್ಕೊಟಿಕ್ಸ್​ ಕಂಟ್ರೋಲ್ ಬ್ಯುರೋದಿಂದ (NCB) ಅರೆಸ್ಟ್ ಆಗಿರೋ ನಟಿ ರಿಯಾ ಚಕ್ರಬರ್ತಿಯ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 6ರವರೆಗೆ ವಿಸ್ತರಿಸಿ ಎನ್​ಡಿಪಿಎಸ್​ ವಿಶೇಷ ಕೋರ್ಟ್​ ಆದೇಶ ಹೊರಡಿಸಿದೆ. ರಿಯಾಳ ನ್ಯಾಯಾಂಗ ಬಂಧನ ಇಂದಿಗೆ ಅಂತ್ಯವಾಗಬೇಕಿತ್ತು. ಈ ಹಿನ್ನೆಲೆ ವಿಚಾರಣೆ ನಡೆಸಿದ ಕೋರ್ಟ್ ರಿಯಾ ಮತ್ತು ಶೌವಿಕ್​ರ ನ್ಯಾಯಾಂಗ ಬಂಧನವನ್ನ ಮತ್ತೆ 14 ದಿನಗಳ ಕಾಲ ವಿಸ್ತರಿಸಿದೆ.

ಈ ಹಿನ್ನೆಲೆ ರಿಯಾ ಮತ್ತು ಆಕೆಯ ಸಹೋದರ ಶೌವಿಕ್ ಚಕ್ರಬರ್ತಿ ಬಾಂಬೆ ಹೈಕೋರ್ಟ್​ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ನಾಳೆ ಈ ಅರ್ಜಿಯ ವಿಚಾರಣೆ ನಡೆಯಲಿದ್ದು, ಬೇಲ್ ಸಿಗುವ ನಿರೀಕ್ಷೆಯಲ್ಲಿ ರಿಯಾ ಮತ್ತು ಶೌವಿಕ್ ಇದ್ದಾರೆ. ಅಂದ್ಹಾಗೆ ಸೆಪ್ಟೆಂಬರ್ 9ರಂದು ಅರೆಸ್ಟ್ ಆಗಿದ್ದ ರಿಯಾ ಚಕ್ರಬರ್ತಿ ಸದ್ಯ ಮುಂಬೈನ ಬೈಕುಲ್ಲಾ ಜೈಲಿನಲ್ಲಿದ್ದಾರೆ.

-masthmagaa.com

Contact Us for Advertisement

Leave a Reply