ಹಾವು ಹಿಡ್ಕೊಂಡು ಗರ್ಭ ಡ್ಯಾನ್ಸ್..! ಐವರ ಬಂಧನ..

ಗುಜರಾತ್‍ನಲ್ಲಿ ಮಹಿಳೆಯರು ಹಾವುಗಳನ್ನು ಹಿಡಿದು ಗರ್ಭ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಘಟನೆ ಸಂಬಂಧ 12 ವರ್ಷದ ಬಾಲಕಿ ಸೇರಿದಂತೆ ಒಟ್ಟು ಐವರನ್ನು ಬಂಧಿಸಲಾಗಿದೆ. ಡ್ಯಾನ್ಸ್ ಮಾಡುತ್ತಿರುವ ಮಹಿಳೆಯರ ಪೈಕಿ ಮೊದಲ ಸಾಲಿನಲ್ಲಿ ಮೂವರು ನಿಂತಿದ್ದರು. ಅವರಲ್ಲಿ ಇಬ್ಬರು ಕಾಳಿಂಗ ಸರ್ಪ ಹಿಡಿದುಕೊಂಡಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿತ್ತು. ಜುನಾಗಢದ ಶಿಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮಹಿಳೆ ಹಾವಿನ ಬಾಲ ಹಿಡಿದಿದ್ದು, ಹಾವಿನ ಉಳಿದ ಭಾಗ ನೆಲದಲ್ಲಿದೆ. ಆ ಹಾವು ಮಹಿಳೆಯಿಂದ ತಪ್ಪಿಸಿಕೊಂಡು ಹೋಗಲು ಒದ್ದಾಡುತ್ತಿದೆ. ಕಾರ್ಯಕ್ರಮದ ಆಯೋಜಕರು ಮತ್ತು ಹಾವು ಪೂರೈಸಿದವರ ಹೆಸರು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಯಲ್ಲಿ 12 ವರ್ಷದ ಬಾಲಕಿಯೊಬ್ಬಳು ಭಾಗಿಯಾಗಿದ್ದು, ಆಕೆಯನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ಕಳುಹಿಸಲಾಗಿದೆ. ಸದ್ಯ ಐವರಿಗೂ ಜಾಮೀನು ಸಿಕ್ಕಿದೆ.

Contact Us for Advertisement

Leave a Reply