ಕಲಬುರಗಿ: ಸಿಮೆಂಟ್‌ ಕಂಪನಿ ವಿರುದ್ಧ 183 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದ ರೈತ ಸಾವು

masthmagaa.com:

ಕಲಬುರಗಿಯಲ್ಲಿರುವ ಸಿಮೆಂಟ್‌ ಕಂಪನಿಯೊಂದ್ರ ವಿರುದ್ಧ ಕಳೆದ 183 ದಿನಗಳಿಂದ ವಿವಿಧ ಬೇಡಿಕೆ ಆಗ್ರಹಿಸಿ ಧರಣಿ ನಡೆಸುತ್ತಿದ್ದ ಓರ್ವ ರೈತ ಮೃತಪಟ್ಟಿದ್ದಾರೆ. ದೇವೀಂದ್ರಪ್ಪ ಅನ್ನೊ ರೈತ ಶ್ರೀ ಸಿಮೆಂಟ್‌ ಕಂಪನಿಗೆ ತನ್ನ 2 ಎಕರೆ 20 ಗುಂಟೆ ಜಮೀನು ನೀಡಿದ್ದು, ಕೆಲಸವಿಲ್ಲದೆ ಕೂಲಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಇನ್ನು ಕಂಪನಿಯು ಜಾಬ್‌ ಕಾರ್ಡ್‌ ಕೊಟ್ಟಿದ್ದು, ಮೃತ ರೈತನ ಮಗನಿಗೆ ಕಲಸ ಕೊಡದೇ ಕಂಪನಿ ಮೋಸ ಮಾಡಿದೆ ಅಂತ ಆರೋಪಿಸಲಾಗಿದೆ. ಅಲ್ದೆ ಉದ್ಯೋಗ ಕೊಡುವುದಾಗಿ ಭರವಸೆ ನೀಡಿ ಹಲವಾರು ರೈತರ ಜಮೀನು ಖರೀದಿಸಿದ್ದ ಕಂಪನಿ, ನಂತ್ರ ಮಾತಿನಂತೆ ರೈತರಿಗೆ ಉದ್ಯೋಗ ನೀಡಿಲ್ಲ. ಹೀಗಾಗಿ ಕಳೆದ 183 ದಿನಗಳಿಂದ ಸೂಕ್ತ ಪರಿಹಾರ ಅಥ್ವಾ ಉದ್ಯೋಗ ನೀಡುವಂತೆ ನಿರಂತರವಾಗಿ ರೈತರು ಧರಣಿ ನಡೆಸುತ್ತಿದ್ದಾರೆ.

-masthmagaa.com

Contact Us for Advertisement

Leave a Reply