masthmagaa.com:

ಕೃಷಿ ಕಾನೂನುಗಳನ್ನ ವಿರೋಧಿಸಿ ಪ್ರತಿಭಟನೆ ನಡೆಸ್ತಿರೋರಿಗೆ ರಿಹಾನ್ನಾ, ಗ್ರೇಟಾ ಥನ್​ಬರ್ಗ್​, ಮೀನಾ ಹ್ಯಾರಿಸ್, ಮಿಯಾ ಖಲಿಫಾ ಮುಂತಾದ ವಿದೇಶಿ ಗಣ್ಯರು ಬೆಂಬಲ ಸೂಚಿಸಿದ ಬೆನ್ನಲ್ಲೇ ದೇಶದಲ್ಲೂ ಕೆಲವೊಂದಷ್ಟು ಜನ ಅವರ ಪರವಾಗಿ, ಇನ್ನು ಕೆಲವೊಂದಷ್ಟು ಜನ ಅವರ ವಿರುದ್ಧವಾಗಿ ನಿಂತಿದ್ದಾರೆ. ಒಂದ್​ ಲೆಕ್ಕದಲ್ಲಿ ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿದವರ ವಿರುದ್ಧ ನಿಂತೋರೇ ಹೆಚ್ಚಿದ್ದಾರೆ ಅನ್ಬೋದು. ಅದ್ರಲ್ಲಿ ಬಾಲಿವುಡ್​ ನಟ-ನಟಿಯರಾದ ಕಂಗನಾ ರನಾವತ್, ಅಕ್ಷಯ್​ ಕುಮಾರ್, ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ ಮುಂತಾದವರು ಇದ್ದಾರೆ. ಆದ್ರೆ ಬಾಲಿವುಡ್ ನಟಿ​ ತಾಪ್ಸಿ ಪನ್ನು ಸೇರಿದಂತೆ ಒಂದಷ್ಟು ಜನ ವಿದೇಶಿ ಸೆಲೆಬ್ರಿಟಿಗಳ ನಡೆಯನ್ನ ಸಮರ್ಥಿಸಿಕೊಳ್ಳುವಂತೆ ಮಾತನಾಡಿದ್ದಾರೆ. ತಾಪ್ಸಿ ಪನ್ನು ಏನ್ ಹೇಳಿದ್ದಾರೆ ಅಂದ್ರೆ, ‘ಒಂದು ಟ್ವೀಟ್ ಅಥವಾ ಒಂದು ಜೋಕ್​​ ನಿಮ್ಮ ಒಗ್ಗಟ್ಟು, ಭಾವನೆ, ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟು ಮಾಡುತ್ತೆ ಅನ್ನೋದಾದ್ರೆ ನಿಮ್ಮ ವ್ಯವಸ್ಥೆಗಳೇ ಅಷ್ಟೊಂದು ದುರ್ಬಲವಾಗಿದೆ ಅಂತ ಅರ್ಥ. ಮೊದಲು ಅದನ್ನ ಬಲಗೊಳಿಸಿ’ ಎಂದಿದ್ದಾರೆ. ಇದಕ್ಕೆ ತೀವ್ರವಾಗಿ ತಿರುಗೇಟು ಕೊಟ್ಟಿರೋ ಕಂಗನಾ ರನಾವತ್, ‘ಬಿ ಗ್ರೇಡ್​ ಜನರ ಥಿಂಕಿಂಗ್ ಬಿ ಗ್ರೇಡೇ ಆಗಿರುತ್ತೆ. ಪ್ರತಿಯೊಬ್ಬರು ಕೂಡ ತಮ್ಮ ಧಾರ್ಮಿಕ ಭಾವನೆ, ಮಾತೃಭೂಮಿ, ಕುಟುಂಬಕ್ಕಾಗಿ ಎದ್ದು ನಿಲ್ಲಲೇಬೇಕು. ಇದು ಕರ್ತವ್ಯ ಮತ್ತು ಧರ್ಮ ಕೂಡ ಹೌದು. ಫುಕ್ಸಟ್ಟೆ ದುಡ್ಡು ನುಂಗುವ ನಿಮ್ಮಂಥವರು ಈ ದೇಶದ ಹೊರೆಯಾಗಬೇಡಿ. ನಿಮ್ಮ ಅಮ್ಮನಿಗೆ ನಾನು ಬೈದ್ರೆ ನಿಮ್ಗೆ ಬೇಜಾರಾಗಲ್ವಾ ಪೆದ್ದು? ಬೇರೆಯವರ ಅನ್ನ ತಿಂದು ಬದುಕುವ ನಿಮ್ಮಂಥವರಿಗೆ ಇದು ಅರ್ಥ ಆಗಲ್ಲ, ಬಾಯಿ ಮುಚ್ಚು ಈಗ’ ಅಂತ ಕಂಗನಾ ಹೇಳಿದ್ದಾರೆ. ಇಷ್ಟೇ ಅಲ್ಲ, ನಿನ್ನೆಯಿಂದ ಸರಣಿ ಟ್ವೀಟ್ ಮಾಡ್ತಿರೋ ಕಂಗನಾ ರನಾವತ್, ದೇಶವನ್ನ ಮಾರಿ ತಿನ್ನೋರೇ ಇದಕ್ಕೆಲ್ಲಾ ನಿಮ್ಗೆ ತಕ್ಕ ಶಾಸ್ತಿ ಆಗುತ್ತೆ. ಅದನ್ನ ಜಗತ್ತು ನೋಡುತ್ತೆ ಎಂದಿದ್ದಾರೆ. ಮತ್ತೊಂದು ಟ್ವೀಟ್​ನಲ್ಲಿ, 3 ಕೃಷಿ ಕಾನೂನುಗಳಿಗೆ ಅಮೆರಿಕ ಬೆಂಬಲ ಕೊಟ್ಟಿದ್ದನ್ನ ಉಲ್ಲೇಖಿಸಿ, ನೋಡಿ ನಿಮ್ಮ ಅಪ್ಪ ಕೂಡ ನಿಮ್ಮನ್ನ ಕಾಪಾಡಲು ಬಾರದೇ ಓಡೋಗಿದ್ದಾನೆ ಅಂತ ಹೇಳಿದ್ದಾರೆ. ಮತ್ತೊಂದುಕಡೆ ಕ್ರಿಕೆಟರ್ ರೋಹಿತ್ ಶರ್ಮಾ ಮೇಲೂ ಮುಗಿಬಿದ್ದಿರುವ ಕಂಗನಾ ರನಾವತ್, ಅಗಸನ ನಾಯಿ ಮನೆಗೂ ಅಲ್ಲ ಮಸಣಕ್ಕೂ ಅಲ್ಲ ಅನ್ನೋ ರೀತಿ ಎಂದಿದ್ದಾರೆ. ಕಂಗನಾರ ಈ ಟ್ವೀಟ್ ಸೇರಿದಂತೆ ಹಲವು ಟ್ವೀಟ್​ಗಳನ್ನ ಟ್ವಿಟ್ಟರ್ ಸಂಸ್ಥೆ ಡಿಲೀಟ್ ಮಾಡಿದೆ. ಇದು ಟ್ವಿಟ್ಟರ್​​ ನಿಯಮಕ್ಕೆ ವಿರುದ್ಧವಾಗಿದೆ ಅಂತ ಕಾರಣವನ್ನೂ ಕೊಟ್ಟಿದೆ.

-masthmagaa.com

Contact Us for Advertisement

Leave a Reply