ಜಗ್ಗೇಶ್​ ಸರ್​ಗೆ ಬೇಜಾರಾಗಿದ್ರೆ ಕ್ಷಮೆ ಕೇಳ್ತೀನಿ: ನಟ ದರ್ಶನ್

masthmagaa.com:

ನಟ ಜಗ್ಗೇಶ್ ಮತ್ತು ದರ್ಶನ್​ ಅಭಿಮಾನಿಗಳ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇವತ್ತು ಮೊದಲ ಬಾರಿ ಮಾತನಾಡಿದ್ದಾರೆ. ‘ಜಗ್ಗೇಶ್​ ಸರ್​ ಹಿರಿಯರು. ಅವರು ನಮ್ಮ ಮುಂದಿರಬೇಕು. ನನ್ನಿಂದ, ನನ್ನ ಅಭಿಮಾನಿಗಳಿಂದ ಜಗ್ಗೇಶ್​ ಸರ್​ಗೆ ಏನಾದ್ರೂ ಬೇಜಾರಾಗಿದ್ರೆ ಕ್ಷಮೆ ಕೇಳ್ತೀನಿ. ಈ ಗಲಾಟೆ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ. ನನ್ನ ಗಮನಕ್ಕೇನಾದ್ರೂ ಬಂದಿದ್ರೆ ಗಲಾಟೆ ಮಾಡಲು ಹೋಗಿದ್ದ ನಮ್ಮ ಹುಡುಗರಿಗೆ ಎರಡು ಬಿಟ್ಟು ಕಳಿಸ್ತಿದ್ದೆ. ನಮ್ಮ ಬಗ್ಗೆ ಹಿರಿಯರು ಮಾತಾಡಿದ್ರೆ ತಪ್ಪೇನಿದೆ. ನಾನು ಜಗ್ಗೇಶ್​​ ಸರ್​ಗೆ ಕಾಲ್ ಮಾಡಿದ್ದೆ. ಆದ್ರೆ ಸಂಪರ್ಕ ಸಾಧ್ಯವಾಗಿರಲಿಲ್ಲ. ಹೀಗಾಗಿ ಮಾತನಾಡಲು ಆಗಿರಲಿಲ್ಲ. ಅವರು ಸಂಪರ್ಕಕ್ಕೆ ಸಿಕ್ಕಿದ್ರೆ ಎಲ್ಲವೂ ಇತ್ಯರ್ಥವಾಗ್ತಿತ್ತು. ಜಗ್ಗೇಶ್​ ಸರ್​ ಮನೆಗೆ ಬಂದ್ರೆ ಆತಿಥ್ಯ ನೀಡ್ತೀನಿ. ರೇಸ್​ಗೆ ನಿಂತ್ರೆ ನಾನು ಕೂಡ ರೇಸ್​ಗೆ ನಿಲ್ತೀನಿ’ ಅಂತ ದರ್ಶನ್​ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply