masthmagaa.com:

ಸ್ಯಾಂಡಲ್​ವುಡ್​ ನಶಾ ಲೋಕಕ್ಕೆ ಸಂಬಂಧಿಸಿದಂತೆ ಬಿಗ್​ ಬಾಸ್ ಸೀಸನ್-6​ ಖ್ಯಾತಿಯ ಆಡಂ ಪಾಷಾರನ್ನು ಎನ್​ಸಿಬಿ (Narcotics Control Bureau) ಅಧಿಕಾರಿಗಾಳು ಅರೆಸ್ಟ್ ಮಾಡಿದ್ದಾರೆ. ಈತ ಇದೇ ಪ್ರಕರಣದಲ್ಲಿ ಬಂಧಿತಳಾಗಿರುವ ಡ್ರಗ್ ಪೆಡ್ಲರ್​ ಅನಿಕಾ ಜೊತೆ ನಶಾ ಸಾಮಗ್ರಿಗಳನ್ನು ಖರೀದಿಸುತ್ತಿದ್ದ ಅಂತ ಹೇಳಲಾಗ್ತಿದೆ. ಹೀಗಾಗಿ ಅವರನ್ನು ವಶಕ್ಕೆ ಪಡೆಯಲಾಗಿದೆ ಅಂತ ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಇದೀಗ ಬಿಗ್ ಬಾಸ್ ಖ್ಯಾತಿಯ ಆಡಂ ಪಾಷಾರನ್ನು ಕೂಡ ಅರೆಸ್ಟ್ ಮಾಡಲಾಗಿದೆ.

ಈ ಹಿಂದೆ ಆರೋಪ ಕೇಳಿ ಬಂದಾಗ ಮಾತನಾಡಿದ್ದ ಆಡಂ ಪಾಷಾ, ‘1 ವರ್ಷದ ಹಿಂದೆ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿರುವ ಡ್ಯಾನ್ಸ್ ಕ್ಲಬ್​ನಲ್ಲಿ ಅನಿಕಾಳನ್ನು ಭೇಟಿಯಾಗಿದ್ದೆ. ಆಗ ಆಕೆ ತನ್ನ ಹೆಸರು ನಿಕಿ ಅಂತ ಹೇಳಿಕೊಂಡಿದ್ದಳು. ಆದ್ರೆ ಆಕೆ ಡ್ರಗ್ ಪೆಡ್ಲರ್ ಅಂತ ಗೊತ್ತಿರಲಿಲ್ಲ. ನಾನು ಯಾವುದೇ ಕಾನೂನುಬಾಹಿರ ಕೆಲಸವನ್ನು ಮಾಡಿಲ್ಲ. ಹೀಗಾಗಿ ನನಗೆ ಯಾವುದೇ ಭಯ ಇಲ್ಲ’ ಅಂತ ಹೇಳಿದ್ದರು.

-masthmagaa.com

Contact Us for Advertisement

Leave a Reply