ವರಾಹರೂಪಂ ಸಾಂಗ್‌ ವಿವಾದದಲ್ಲಿ ಹೊಂಬಾಳೆ ಫಿಲ್ಮ್ಸಂಗೆ ಹಿನ್ನಡೆ!

masthmagaa.com:

ʻಕಾಂತಾರʼ ಸಿನಿಮಾದ ವರಾಹ ರೂಪಂ ಹಾಡನ್ನ ಒಪ್ಪಿಗೆ ಇಲ್ದೇ ಪ್ರಸಾರ ಮಾಡಬಾರ್ದು ಅಂತ ಕೇರಳದ ಸ್ಥಳೀಯ ನ್ಯಾಯಾಲಯಗಳು ಆದೇಶ 32 ನೀಡಿದ್ವು. ಈ ಆದೇಶವನ್ನ ಪ್ರಶ್ನಿಸಿ ಹೊಂಬಾಳೆ ಫಿಲ್ಮ್ಸ್, ಕೇರಳ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. ಆದರೆ ಕೋರ್ಟ್‌ ಈ ಅರ್ಜಿಯನ್ನ ತಿರಸ್ಕರಿಸಿದೆ. ಅಂದ್ಹಾಗೆ ಮಲಯಾಳಂನ ಖ್ಯಾತ ಮ್ಯೂಸಿಕ್ ಬ್ಯಾಂಡ್ ‘ತೈಕ್ಕುಡಂ ಬ್ರಿಡ್ಜ್’ನ ‘ನವರಸಂ’ ಹಾಡಿನಲ್ಲಿರುವ ಟ್ಯೂನ್​ ‘ವರಾಹ ರೂಪಂ’ನಲ್ಲಿದೆ ಅಂತೇಳಿ ಕೇಸ್‌ ದಾಖಲಿಸಿತ್ತು. ಈ ಹಿನ್ನಲೆಯಲ್ಲಿ ವರಾಹರೂಪಂ ಸಾಂಗ್‌ಗೆ ತಡೆ ನೀಡಲಾಗಿದೆ. ಅಂದ್ಹಾಗೆ ಕಾಂತಾರ ಇಂದಿನಿಂದ OTTಯಲ್ಲಿ ಕೂಡ ಬಿಡುಗಡೆಯಾಗಿದೆ.

-masthmagaa.com

Contact Us for Advertisement

Leave a Reply