ವಿಶ್ವಕಪ್ ತಂದುಕೊಟ್ಟ ಕಪಿಲ್​ ದೇವ್​ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

masthmagaa.com:

ಮಾಜಿ ಕ್ರಿಕೆಟರ್​ ಮತ್ತು 1983ರಲ್ಲಿ ಭಾರತಕ್ಕೆ ಮೊದಲ ವಿಶ್ವಕಪ್ ತಂದುಕೊಟ್ಟ ತಂಡದ ನಾಯಕ ಕಪಿಲ್ ದೇವ್​ಗೆ​ ಹೃದಯಾಘಾತವಾಗಿದ್ದು ದೆಹಲಿಯ ಫೊರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಒಂದೆರಡು ದಿನಗಳಲ್ಲಿ ಡಿಸ್ಚಾರ್ಜ್ ಆಗುವ ನಿರೀಕ್ಷೆ ಇದೆ ಅಂತ ಆಸ್ಪತ್ರೆ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.

ಅಂದ್ಹಾಗೆ ಕಪಿಲ್ ದೇವ್ ಇತ್ತೀಚೆಗೆ ಹಾರ್ಮೊನೈಝರ್ ಇಂಡಿಯಾ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಸುದ್ದಿಯಾಗಿದ್ದರು. 2015ರಿಂದ ಇಲ್ಲಿವರೆಗೆ ಅವರು ಹಲವು ಸ್ಟಾರ್ಟ್​​ಅಪ್​ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. 1983ರ ವಿಶ್ವಕಪ್ ಆಧಾರಿತ ‘83’ ಅನ್ನೋ ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ. ಇದರಲ್ಲಿ ಬಾಲಿವುಡ್​ ನಟ ರಣವೀರ್ ಸಿಂಗ್ ಕಪಿಲ್ ದೇವ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರವನ್ನು ಕಬಿರ್ ಖಾನ್ ನಿರ್ದೇಶಿಸಿದ್ದು, ದೀಪಿಕಾ ಪಡುಕೋಣೆ ಸೇರಿದಂತೆ ಹಲವರು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

ಕಪಿಲ್ ದೇವ್​ 131 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿ, 434 ವಿಕೆಟ್ ಹಾಗೂ 5,248 ರನ್ ಗಳಿಸಿದ್ದಾರೆ. 225 ಏಕದಿನ ಪಂದ್ಯಗಳಲ್ಲಿ 253 ವಿಕೆಟ್ ಹಾಗೂ 3,783 ರನ್ ದಾಖಲಿಸಿದ್ದಾರೆ.

-masthmagaa.com

Contact Us for Advertisement

Leave a Reply