ಕ್ಸಿ ಜಿನ್ ಪಿಂಗ್‍ಗೆ ಮೋದಿ 56 ಇಂಚಿನ ಎದೆ ತೋರಿಸಲಿ: ಕಾಂಗ್ರೆಸ್

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ ಇವತ್ತು ಭಾರತಕ್ಕೆ ಬರ್ತಿದ್ದಾರೆ. ಪ್ರಧಾನಿ ಮೋದಿ ಜೊತೆ ನಾಲ್ಕೈದು ಸಭೆಯಲ್ಲಿ ಭಾಗಿಯಾಗಲಿದ್ದು, 5 ಗಂಟೆಗಳ ಕಾಲ ಮಾತುಕತೆ ನಡೆಸಲಿದ್ದಾರೆ. ಇಡೀ ವಿಶ್ವದ ಕಣ್ಣು ಈ ಭೇಟಿ ಮೇಲೆ ನಿರ್ಧಾರಿತವಾಗಿದೆ. ಆದ್ರೆ ಕಾಂಗ್ರೆಸ್ ಇಲ್ಲೂ ತನ್ನ ರಾಜಕೀಯವನ್ನು ಮುಂದುವರಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರೋ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ಮೋದಿಯವರು ಈಗ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರಿಗೆ ತಮ್ಮ 56 ಇಂಚಿನ ಎದೆಯನ್ನು ತೋರಿಸಲಿ. ಅಥವಾ ಕ್ಸಿ ಜಿನ್ ಪಿಂಗ್ ಅವರ ಕಣ್ಣಲ್ಲಿ ಕಣ್ಣಿಟ್ಟು ಪಾಕ್ ಆಕ್ರಮಿತ ಕಾಶ್ಮೀರದ 5 ಸಾವಿರ ಕಿಲೋಮೀಟರ್ ಜಾಗವನ್ನು ಖಾಲಿ ಮಾಡುವಂತೆ ಹೇಳಲಿ ಎಂದು ಸಲಹೆ ಕೊಟ್ಟಿದ್ದಾರೆ.

ಜೊತೆಗೆ ಕ್ಸಿ ಜಿನ್ ಪಿಂಗ್ 370ನೇ ವಿಧಿಯ ವಿಚಾರದಲ್ಲಿ ಪಾಕಿಸ್ತಾನವನ್ನು ಬೆಂಬಲಿಸುತ್ತಾರೆ. ಹೀಗಾಗಿ ಮೋದಿ ಮಾಮಲ್ಲಾಪುರಂನಲ್ಲಿ ಕ್ಸಿ ಜಿನ್ ಪಿಂಗ್ ಅವರ ಕಣ್ಣಲ್ಲಿ ಕಣ್ಣಿಟ್ಟು, ಪಿಒಕೆಯಲ್ಲಿ ವಶಕ್ಕೆ ಪಡೆದಿರುವ 5 ಸಾವಿರ ಕಿಲೋಮೀಟರ್ ಭೂಮಿ ಖಾಲಿ ಮಾಡುವಂತೆ ಮತ್ತು ಭಾರತಕ್ಕೆ 5ಜಿಗಾಗಿ ಚೀನಾದ ಹುವೇಯಿ ಕಂಪನಿಯ ಅಗತ್ಯವಿಲ್ಲ ಅಂತ ಹೇಳಲಿ ಎಂದಿದ್ದಾರೆ.

Contact Us for Advertisement

Leave a Reply