ACBಯಿಂದ ಭ್ರಷ್ಟರ ಬೇಟೆ: ಯಾವ ಜಿಲ್ಲೆಯಲ್ಲಿ, ಯಾರಿಗೆ ಶಾಕ್ ಗೊತ್ತಾ​​?

masthmagaa.com:

ರಾಜ್ಯದಲ್ಲಿ ಇವತ್ತು ಎಸಿಬಿ – ಆ್ಯಂಟಿ ಕರಪ್ಷನ್​ ಬ್ಯೂರೋ ನಡೆಸಿದ ದಾಳಿಯದ್ದೇ ದೊಡ್ಡ ಸುದ್ದಿ. ಇದು ಅಂತಿಂಥಾ ದಾಳಿಯಲ್ಲ. ಒಂದ್​ರೀತಿ ಭರ್ಜರಿ ಬೇಟೆ ಅನ್ಬೋದು. ಒಂದೇ ದಿನ ಏಕಕಾಲದಲ್ಲಿ ರಾಜ್ಯದ 68 ಕಡೆ 400ಕ್ಕೂ ಹೆಚ್ಚು ಅಧಿಕಾರಿಗಳು ನಡೆಸಿದ ದಾಳಿ. ಅಕ್ರಮ ಆಸ್ತಿ ಸಂಪಾದನೆಯ ಆರೋಪ ಹೊತ್ತಿದ್ದ ವಿವಿಧ ಇಲಾಖೆಗಳ 15 ಸರ್ಕಾರಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸಿದೆ. ದಾಳಿ ವೇಳೆ ಅಪಾರ ಪ್ರಮಾಣದ ನಗದು, ಕೆಜಿಗಟ್ಟಲೆ ಚಿನ್ನಾಭರಣ, ಬೆಳ್ಳಿ ಆಭರಣ, ಬೆಳ್ಳಿ ವಸ್ತುಗಳು, ಕೆಜಿಗಟ್ಟಲೆ ಚಿನ್ನದ ಬಿಸ್ಕತ್​​, ವಜ್ರ, ಬೆಲೆ ಬಾಳುವ ವಸ್ತುಗಳು, ಆದಾಯಕ್ಕೂ ಮೀರಿದ ಆಸ್ತಿ ಪತ್ರಗಳು ಪತ್ತೆಯಾಗಿವೆ. ಕೆಲ ಅಧಿಕಾರಿಗಳು ತಮ್ಮ ಮನೆಯ ಪೈಪ್​​ನಲ್ಲೆಲ್ಲಾ ಕಂತೆ ಕಂತೆ ದುಡ್ಡನ್ನ ಬಚ್ಚಿಟ್ಟಿದ್ದರು. ಆ ಪೈಪ್​ ಅನ್ನ ಕಟ್​ ಮಾಡಿ ಅದರೊಳಗೆ ಉದ್ದನೆಯ ಕೋಲು ಹಾಕಿ ಆ ದುಡ್ಡನ್ನ ಎಳೆದು ಹೊರಗೆ ಹಾಕಿದ್ದಾರೆ ಎಸಿಬಿ ಅಧಿಕಾರಿಗಳು. ವಿಚಾರಣೆಯ ಭಾಗವಾಗಿ ಈ ನಗದು, ಚಿನ್ನಾಭರಣ, ಬೆಳೆಬಾಳುವ ವಸ್ತುಗಳನ್ನ ಸೀಜ್​ ಮಾಡಲಾಗಿದೆ. ಹಾಗಿದ್ರೆ ಯಾವ ಜಿಲ್ಲೆಯಲ್ಲಿ, ಯಾರ್ಯಾರ ಮನೆ, ಕಚೇರಿ ಮತ್ತು ಸಂಬಂಧಿಕರ ಮನೆ ಮೇಲೆ ದಾಳಿ ನಡೀತು ಅಂತ ನೋಡ್ತಾ ಹೋಗೋಣ. ಇದು ನೋಡೋದು ತುಂಬಾ ಮುಖ್ಯ ಇವರ ಹುದ್ದೆ, ಇಲಾಖೆ ಕಡೆ ಚೂರು ಗಮನ ಹರಿಸಿ. ಆಗ ಈ ದೇಶ ಇನ್ನೂ ಯಾಕೆ ಉದ್ದಾರ ಆಗಿಲ್ಲ. ಈ ದೇಶದ ದುಡ್ಡು ಹೇಗೆ ಎಲ್ಲಾ ಲೆವೆಲ್ ನಲ್ಲೂ ಹೆಗ್ಗಣಗಳ ಬಿಲ ಸೇರ್ತಿದೆ ಅಂತ ಗೊತ್ತಾಗುತ್ತೆ.

ಬೆಂಗಳೂರು ನಗರ – 6 ಜನರ ಮೇಲೆ ರೇಡ್
ಮಾಯಣ್ಣ
ಪ್ರಥಮ ದರ್ಜೆ ಸಹಾಯಕ, ಬಿಬಿಎಂಪಿ.
ಜಿ.ವಿ. ಗಿರಿ
ಡಿ ದರ್ಜೆ ನೌಕರ, ಬಿಬಿಎಂಪಿ, ಯಶವಂತಪುರ.
ಎಲ್​.ಸಿ. ನಾಗರಾಜ್​​
ಸಕಾಲ ಮಿಷನ್​​ನ ಆಡಳಿತಾಧಿಕಾರಿ.
ರಾಜಶೇಖರ್
ಪಿಸಿಯೋಥೆರಪಿಸ್ಟ್, ಯಲಹಂಕ ಸರ್ಕಾರಿ ಆಸ್ಪತ್ರೆ.
ವಾಸುದೇವ್​
ಮಾಜಿ ಪ್ರಾಜೆಕ್ಟ್ ಮ್ಯಾನೇಜರ್, ಬೆಂಗಳೂರು ನಿರ್ಮಿತಿ ಕೇಂದ್ರ.
ಬಿ. ಕೃಷ್ಣಾರೆಡ್ಡಿ
ಜನರಲ್​ ಮ್ಯಾನೇಜರ್, ನಂದಿನಿ ಡೈರಿ, ಬೆಂಗಳೂರು

ಬೆಳಗಾವಿ – 3 ಜನರ ಮೇಲೆ ರೇಡ್
ಸದಾಶಿವ ಮಾರಲಿಂಗಣ್ಣನವರ್​
RTO​, ಗೋಕಾಕ್​
ನಾತಾಜಿ ಹೀರಾಜಿ ಪಾಟೀಲ್​
ಸಿ ದರ್ಜೆ ನೌಕರ, ಹೆಸ್ಕಾಂ, ಬೆಳಗಾವಿ
ಎ.ಕೆ. ಮಾಸ್ತಿ
ಸವದತ್ತಿಯ ಸಹಕಾರಿ ಅಭಿವೃದ್ಧಿ ಕಚೇರಿ ಅಧಿಕಾರಿ

ದಕ್ಷಿಣ ಕನ್ನಡ
ಕೆ.ಎಸ್​. ಲಿಂಗೇಗೌಡ
ಸ್ಮಾರ್ಟ್ ಸಿಟಿ ಎಕ್ಸಿಕ್ಯುಟಿವ್​ ಇಂಜಿನಿಯರ್​, ಮಂಗಳೂರು ಪಾಲಿಕೆ

ಬೆಂಗಳೂರು ಗ್ರಾಮಾಂತರ
ಲಕ್ಷ್ಮಿನರಸಿಂಹಯ್ಯ,
ಕಂದಾಯ ನಿರೀಕ್ಷಕ, ದೊಡ್ಡಬಳ್ಳಾಪುರ

ಮಂಡ್ಯ
ಶ್ರೀನಿವಾಸ್​ ಕೆ
ಕಾವೇರಿ ನೀರಾವರಿ ನಿಗಮ (HLBC) ಎಕ್ಸಿಕ್ಯುಟಿವ್​ ಇಂಜಿನಿಯರ್, ಕೆ.ಆರ್​. ಪೇಟೆ​

ಬಳ್ಳಾರಿ
ಕೆ.ಎಸ್​. ಶಿವಾನಂದ್​
ನಿವೃತ್ತ ಸಬ್​ ರಿಜಿಸ್ಟ್ರಾರ್ (ಸ್ಟಾಂಪ್ಸ್)​, ಬಳ್ಳಾರಿ

ಗದಗ
ಟಿ.ಎಸ್​. ರುದ್ರೇಶಪ್ಪ
ಕೃಷಿ ಇಲಾಖೆ ಜಂಟಿ ನಿರ್ದೇಶಕ

ಕಲಬುರಗಿ
ಎಸ್​.ಎಂ. ಬಿರಾದರ್​
ಲೋಕಪಯೋಗಿ ಇಲಾಖೆ ಕಿರಿಯ ಇಂಜಿನಿಯರ್​, ಜೇವರ್ಗಿ

ಈ ಬಿರಾದರ್​ ಮನೆಯಲ್ಲೇ ಪೈಪ್​ನಲ್ಲಿ ಹಣ ಸಿಕ್ಕಿರೋದು. ಪೈಪ್​ನಿಂದ ಹಣ ಇಳಿಸಿದ ಅಧಿಕಾರಿಗಳು ಅದನ್ನ ಬಕೆಟ್​​ನಲ್ಲಿ ತುಂಬಿಕೊಂಡು ಹೋಗಿ ಪಂಚನಾಮೆ ಮಾಡಿದ್ದಾರೆ. ಪೈಪ್​ನಲ್ಲಿ ಒಟ್ಟು 13 ಲಕ್ಷ ನಗದು ಸಿಕ್ಕಿದೆ. ಇದನ್ನ ಸೇರಿಸಿ ಬಿರಾದರ್ ಮನೆಯಲ್ಲಿ ಒಟ್ಟು 54 ಲಕ್ಷ ರೂಪಾಯಿ ನಗದು ಸಿಕ್ಕಿದೆ. ಮೇಲೆ ಹೇಳಿದ ಅಧಿಕಾರಿಗಳು ಬೇರೆ ಬೇರೆ ಜಿಲ್ಲೆಗಳಲ್ಲೂ ಮನೆ, ಕಚೇರಿ ಹೊಂದಿದ್ದಾರೆ. ಅಲ್ಲೂ ದಾಳಿ ನಡೆದಿದೆ. ಹೀಗಾಗಿ ಈ ಮೇಲೆ ಹೇಳಿದ ಜಿಲ್ಲೆಗಳು ಮಾತ್ರ ಅನ್ಕೋಬೇಡಿ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಿವಿಧ ಕಚೇರಿಗಳ ಮೇಲೆ ಇತ್ತೀಚೆಗೆ ಎಸಿಬಿ ದಾಳಿ ನಡೆದ ಬೆನ್ನಲ್ಲೇ ಈ ದಾಳಿ ಕೂಡ ನಡೆದಿದೆ.

-masthmagaa.com

Contact Us for Advertisement

Leave a Reply