ಸಿಎಂ, ಡಿಸಿಎಂ, ಮಂತ್ರಿಗಳಿಗೆ ‘ಮಹಾ‘ ಪ್ರಚಾರ..! ಸಂತ್ರಸ್ತರ ಕಥೆಯೇನು..?

ರಾಜ್ಯದಲ್ಲಿ ಈ ಸಲ ಮಳೆ ಬಂದು, ಪ್ರವಾಹ ಸಂಭವಿಸಿ ಏನೆಲ್ಲಾ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಅದೆಷ್ಟೋ ಜನ ತಮ್ಮ ಮನೆ-ಜಮೀನು ಕಳೆದುಕೊಂಡು ದಿಕ್ಕೇ ತೋಚದಂತಾಗಿದ್ದಾರೆ. ಆಗ ಪರಿಹಾರ ಸಿಗುತ್ತೆ, ಈಗ ಪರಿಹಾರ ಸಿಗುತ್ತೆ ಅಂತ ನೆರೆ ಸಂತ್ರಸ್ತರು ಕಾಯ್ತಿದ್ದಾರೆ. ಆದ್ರೆ ಸರ್ಕಾರ ಮಾತ್ರ ಈ ಬಗ್ಗೆ ಯಾವುದೇ ರೀತಿಯಲ್ಲೂ ತಲೆಕೆಡಿಸಿಕೊಂಡಂತಿಲ್ಲ. ಆತುರಾತುರವಾಗಿ ಚಳಿಗಾಲದ ಅಧಿವೇಶನ ನಡೆಸಿ, ಮೂರೇ ದಿನಗಳಲ್ಲಿ ಅಧಿವೇಶನ ಮುಗಿಸಿತ್ತು. ಆದ್ರೆ ಅಧಿವೇಶನ ಮುಗಿದ ಬಳಿಕ ರಾಜ್ಯ ಸರ್ಕಾರದ ಯಾವೊಬ್ಬ ಮಂತ್ರಿಯಾಗಲಿ, ಡಿಸಿಎಂ ಆಗಲಿ ನೆರೆಪೀಡಿತ ಪ್ರದೇಶಗಳಿಗೆ  ಭೇಟಿ ನೀಡಿಲ್ಲ. ಬದಲಾಗಿ ಕಳೆದ ಮೂರು ದಿನಗಳಿಂದ ನಮ್ಮ ರಾಜ್ಯದ ಇಬ್ಬರೂ ಡಿಸಿಎಂಗಳು ಮಹಾರಾಷ್ಟ್ರ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ನಿನ್ನೆಯಿಂದ ಸಚಿವರೂ ಕೂಡ ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ಧುಮುಕಿದ್ದು, ಇಂದಿನಿಂದ 2 ದಿನ ಸಿಎಂ ಕೂಡ ಪ್ರಚಾರಕ್ಕೆ ತೆರಳಲಿದ್ದಾರೆ. ಆದ್ರೆ ನೆರೆಯಿಂದಾಗಿ ಎಲ್ಲವನ್ನೂ ಕಳೆದುಕೊಂಡಿರೋ ರಾಜ್ಯದ ಜನ ಇದು ನ್ಯಾಯನಾ..? ಎಂದು ಪ್ರಶ್ನಿಸುತ್ತಿದ್ದಾರೆ.

Contact Us for Advertisement

Leave a Reply