masthmagaa.com:

ಇವತ್ತು ರಾಜ್ಯ ಬಜೆಟ್​ ಮಂಡನೆಯಾಗಿದೆ. ಸಿಎಂ ಯಡಿಯೂರಪ್ಪನವರು 8ನೇ ಬಾರಿ ಬಜೆಟ್ ಮಂಡಿಸಿದ್ದಾರೆ. ಬಜೆಟ್​ನಲ್ಲಿ ಯಾವುದೇ ಹೊಸ ತೆರಿಗೆಯನ್ನ ಹಾಕದಿರೋದು ಜನಸಾಮಾನ್ಯರಿಗೆ ನೆಮ್ಮದಿಯ ವಿಚಾರ. ಆದ್ರೆ ಪೆಟ್ರೋಲ್ ಮತ್ತು ಡೀಸೆಲ್​ ಮೇಲಿನ ತೆರಿಗೆ ಸ್ವಲ್ಪ ಕಮ್ಮಿ ಮಾಡಬಹುದು ಅನ್ನೋ ನಿರೀಕ್ಷೆ ಇತ್ತು. ಆದ್ರೆ ಅದನ್ನ ಹಾಗೇ ಮುಂದುವರಿಸಲಾಗಿದೆ. ಉಳಿದಂತೆ ಎಲ್ಲಾ ಕ್ಷೇತ್ರಗಳನ್ನ, ಎಲ್ಲಾ ಜಾತಿ ಧರ್ಮಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ ಸಿಎಂ ಯಡಿಯೂರಪ್ಪ. ಹಾಗಿದ್ರೆ 2.46 ಲಕ್ಷ ಕೋಟಿ ಮೊತ್ತದ ಬಜೆಟ್​ನಲ್ಲಿ ಏನೇನಿದೆ ಅನ್ನೋದರ ಮುಖ್ಯಾಂಶಗಳು ಇಲ್ಲಿವೆ ನೋಡಿ…

 

ಕೃಷಿ ಕ್ಷೇತ್ರಕ್ಕೆ ಏನು..?

– ಸಾವಯವ ಕೃಷಿ ಉತ್ತೇಜನಕ್ಕೆ ₹500 ಕೋಟಿ ಮೀಸಲಿಡಲಾಗಿದೆ

– ಫಸಲ್ ಬಿಮಾ ಯೋಜನೆಗೆ ₹900 ಕೋಟಿ ಮೀಸಲು

– ಪ್ರಧಾನ ಮಂತ್ರಿ ಸಿಂಚಾಯಿ ಯೋಜನೆಗೆ ₹831 ಕೋಟಿ ಅನುದಾನ

– ಕೃಷಿ ವಿವಿಗಳಲ್ಲಿ ರೈತರ ಮಕ್ಕಳ ಮೀಸಲಾತಿ ಶೇ.50ಕ್ಕೆ ಹೆಚ್ಚಿಸಲಾಗಿದೆ

– ₹150 ಕೋಟಿ ವೆಚ್ಚದಲ್ಲಿ ರೇಷ್ಮೆ ಭವನ ನಿರ್ಮಾಣ ಮಾಡಲಾಗುತ್ತೆ.

– ರಾಮನಗರದಲ್ಲಿ ₹25 ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆಗೂಡು ನಿರ್ಮಾಣ

– 5,500 ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ₹198 ಕೋಟಿ ಅನುದಾನ

– ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ₹50 ಕೋಟಿ ವೆಚ್ಚದ ಹೂವಿನ ಮಾರುಕಟ್ಟೆ ನಿರ್ಮಾಣ

– ಪ್ರತಿ ಜಿಲ್ಲೆಯಲ್ಲಿಯೂ ಗೋಶಾಲೆ ನಿರ್ಮಾಣವಾಗಲಿದೆ

– ಅಡಕೆಯ ಹಳದಿ ಎಲೆ ರೋಗ ತಡೆ ಮತ್ತು ಪರ್ಯಾಯ ಬೆಳೆ ಪ್ರೋತ್ಸಾಹಕ್ಕೆ ₹25 ಕೋಟಿ ಮೀಸಲು

– ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ₹62 ಕೋಟಿ ಅನುದಾನ

– ಮೀನು ಮಾರಾಟ ಉತ್ತೇಜನಕ್ಕೆ ₹30 ಕೋಟಿ ವೆಚ್ಚದಲ್ಲಿ ಮತ್ಸ್ಯ ದರ್ಶಿನಿ ಕೇಂದ್ರಗಳ ಸ್ಥಾಪನೆ

– ಕಳಸಾ ಬಂಡೂರಿ ನೀರಿನ ಬಳಕೆಗೆ ಒಟ್ಟು ₹1,677 ಕೋಟಿ ರೂ. ಅನುದಾನ

 

ಶಿಕ್ಷಣ ಕ್ಷೇತ್ರಕ್ಕೆ ಏನು..?

– ಶಿವಮೊಗ್ಗದ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ಕಾಲೇಜಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆಯಾಗಲಿದೆ

– 50 ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ ₹100 ಕೋಟಿ ಮೀಸಲಿಡಲಾಗಿದೆ

– ಶಾಲಾ ಶೌಚಾಲಯಗಳ ಉನ್ನತೀಕರಣ ಮಾಡಲಾಗುತ್ತೆ

– ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳ ಮೂಲಸೌಕರ್ಯಕ್ಕೆ ₹150 ಕೋಟಿ ಮೀಸಲಿಡಲಾಗಿದೆ

– ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಲ್ಲಿಯೂ ಕಂಪ್ಯೂಟರ್ ಲ್ಯಾಬ್ ಸ್ಥಾಪನೆಯಾಗಲಿದೆ

– ಜ್ಞಾನಪೀಠ ಪುರಸ್ಕೃತರು ಕಲಿತ ಶಾಲೆಗಳ ಅಭಿವೃದ್ಧಿ ಮಾಡಲಾಗುತ್ತೆ

– ಪ್ರಥಮ ದರ್ಜೆ, ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಡಿಜಿಟಲ್ ಕಲಿಕೆಗೆ ಅನುಕೂಲವಾಗುವಂತೆ ಸ್ಮಾರ್ಟ್ ರೂಂ ಸ್ಥಾಪನೆಯಾಗಲಿದೆ

– ಆಯ್ದ ಮಹಾನಗರ ಪಾಲಿಕೆಗಳಲ್ಲಿ ಸಂಜೆ ಕಾಲೇಜು ಆರಂಭವಾಗಲಿದೆ

 

ಆರೋಗ್ಯ ಕ್ಷೇತ್ರಕ್ಕೆ ಏನು..?

– 19 ಜಿಲ್ಲಾಸ್ಪತ್ರೆಗಳಲ್ಲಿ 25 ಹಾಸಿಗೆ ಸಾಮರ್ಥ್ಯದ ಮತ್ತು 100 ಆಸ್ಪತ್ರೆಗಳಲ್ಲಿ 6 ಹಾಸಿಗೆ ಸಾಮರ್ಥ್ಯದ ಐಸಿಯು ಸ್ಥಾಪನೆಗೆ ₹60 ಕೋಟಿ ಮೀಸಲಿಡಲಾಗಿದೆ

– 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನ ಮಾದರಿ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರಿಸಲಾಗುವುದು

– ಅನುವಂಶೀಯ ಕಾಯಿಲೆಗಳ ಪತ್ತೆಗೆ ಬಳ್ಳಾರಿ, ಬೆಂಗಳೂರಲ್ಲಿ ₹10 ಕೋಟಿ ವೆಚ್ಚದಲ್ಲಿ ಪ್ರಯೋಗಾಲಯ ನಿರ್ಮಾಣವಾಗಲಿದೆ

– ಗರ್ಭಿಣಿಯರು ಸ್ಕ್ಯಾನಿಂಗ್ ಮಾಡಿಸಿಕೊಳ್ಳೋದನ್ನ ಹೆಚ್ಚಿಸಲು ₹10 ಕೋಟಿ ಮೊತ್ತದ ‘ಚಿಗುರು’ ಕಾರ್ಯಕ್ರಮ ಪ್ರಾರಂಭವಾಗಲಿದೆ

– ಶಿವಮೊಗ್ಗದ ಆಯುರ್ವೇದ ಕಾಲೇಜು ಆಯುಷ್ ವಿವಿಯಾಗಿ ಮೇಲ್ದರ್ಜೆಗೆ ಏರಿಸಲಾಗುವುದು

– ಶಿವಮೊಗ್ಗ, ಮೈಸೂರಲ್ಲಿ ₹100 ಕೋಟಿ ವೆಚ್ಚದಲ್ಲಿ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ನಿರ್ಮಾಣವಾಗಲಿದೆ

– ಮಹಿಳೆಯರಲ್ಲಿ ಕ್ಯಾನ್ಸರ್ ರೋಗ ಆರಂಭದಲ್ಲೇ ಪತ್ತೆಹಚ್ಚಲು ₹11 ಕೋಟಿ ವೆಚ್ಚದಲ್ಲಿ ಸಂಚಾರಿ ಪ್ರಯೋಗಾಲಯ ಸ್ಥಾಪನೆಯಾಗಲಿದೆ

– ದಾವಣಗೆರೆಯಲ್ಲಿ ₹20 ಕೋಟಿ ವೆಚ್ಚದಲ್ಲಿ 50 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಉಪಕೇಂದ್ರ ಸ್ಥಾಪನೆಯಾಗಲಿದೆ

– ಚಿತ್ರದುರ್ಗ ಜಿಲ್ಲೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣವಾಗಲಿದೆ

– ಹಾಸನ ಮತ್ತು ಮಂಡ್ಯದ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ 100 ಸೀಟುಗಳ ಹೆಚ್ಚಳಮಾಡಲಾಗುತ್ತೆ

– ಧಾರವಾಡದ ಡಿಮ್ಹಾನ್ಸ್ ಸಂಸ್ಥೆಯನ್ನ ಮಾನಸಿಕ ನರರೋಗಿಗಳ ಸುಸಜ್ಜಿತ ಚಿಕಿತ್ಸಾ ಸಂಸ್ಥೆಯಾಗಿ ಮಾರ್ಪಾಡು ಮಾಡಲಾಗುತ್ತೆ. ಇದಕ್ಕೆ ₹75 ಕೋಟಿ ಮೀಸಲು ಇಡಲಾಗಿದೆ

– ಶೇ.75ಕ್ಕಿಂತ ಜಾಸ್ತಿ ಮನೋವೈಕಲ್ಯ ಹೊಂದಿದ ಬುದ್ಧಿಮಾಂದ್ಯರಿಗೆ ಮಾಸಾಶನದ ಮೊತ್ತ ₹1,400ರಿಂದ ₹2,000ಕ್ಕೆ ಏರಿಕೆ ಮಾಡಲಾಗುತ್ತೆ

 

ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ಕ್ಷೇತ್ರಕ್ಕೆ ಏನು..?

– ಸಮಾಜ ಕಲ್ಯಾಣ ಇಲಾಖೆ ವತಿಯಿಂದ ₹50 ಕೋಟಿ ವೆಚ್ಚದಲ್ಲಿ 50 ಹಾಸ್ಟೆಲ್​ಗಳ ನಿರ್ಮಾಣ ಮಾಡಲಾಗುತ್ತೆ

– ಪರಿಶಿಷ್ಟ ಪಂಗಡದ ಶಾಲೆಗಳನ್ನ ‘ವಾಲ್ಮೀಕಿ ಆಶ್ರಮ’ ಎಂದು ಮರುನಾಮಕರಣ ಮಾಡಲಾಗುತ್ತೆ

– ಬೆಳಗಾವಿಯ ನಿಪ್ಪಾಣಿಯಲ್ಲಿ ಕೋಲ್ಹಾಪುರಿ ಪಾದರಕ್ಷೆಗಳ ಕ್ಲಸ್ಟರ್ ಮತ್ತು ಚಿತ್ರದುರ್ಗದಲ್ಲಿ ಪಾದರಕ್ಷೆ ತರಬೇತಿ ಕೇಂದ್ರ ಸ್ಥಾಪನೆಯಾಗಲಿದೆ

– ಹಿಂದುಗಳಿದ ವರ್ಗಗಳ ವಿವಿಧ ನಿಗಮಗಳ ಅಭಿವೃದ್ಧಿಗೆ ₹500 ಕೋಟಿ ಅನುದಾನ ಮೀಸಲಿಡಲಾಗಿದೆ

– ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿಗೆ ₹500 ಕೋಟಿ ಅನುದಾನ, ನೀಡಲಾಗುತ್ಅತೆ ಅದರಲ್ಲಿ 100 ಕೋಟಿ ಈಗಾಗಲೇ ಬಿಡುಗಡೆ ಮಾಡಲಾಗಿದೆ

– ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ ನಿಗಮ ಸ್ಥಾಪನೆ. ಇದಕ್ಕೆ ₹500 ಕೋಟಿ ಖರ್ಚು ಮಾಡಲು ಯೋಜನೆ ಸಿದ್ದಪಡಿಸಲಾಗುಇತ್ತೆ

– ಅಲ್ಪಸಂಖ್ಯಾತರ ಏಳಿಗೆಗಾಗಿ ಒಟ್ಟು ₹1,500 ಕೋಟಿ ಮೀಸಲು ಇಡಲಾಗಿದೆ

– ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ₹200 ಕೋಟಿ ಮೀಸಲು ಇಡಲಾಗಿದೆ

– 400 ಉರ್ದು ಶಾಲೆಗಳಲ್ಲಿ ಇಂಗ್ಲಿಷ್ ಕೂಡ ಆರಂಭ ಮಾಡಲಾಗುತ್ತೆ

– ಜೈನ ಪುಣ್ಯಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಹಂತ ಹಂತವಾಗಿ ₹50 ಕೋಟಿ ಮೀಸಲಿಡಲಾಗುತ್ತೆ ಈ ಬಾರಿ ₹20 ಕೋಟಿ ಮೀಸಲಿಡಲಾಗಿದೆ

– ಕಟ್ಟಡ ಕಾರ್ಮಿಕರ ಮಕ್ಕಳ ಸಂರಕ್ಷಣೆಗೆ 100 ಕಿತ್ತೂರು ರಾಣಿ ಚೆನ್ನಮ್ಮ ಶಿಶು ಪಾಲನಾ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತೆ

– ಗ್ರಾಮೀಣ ಪ್ರದೇಶದ 5,622 ಗ್ರಂಥಾಲಯಗಳ ಉನ್ನತೀಕರಣ ಮಾಡಲಾಗುತ್ತೆ

– ಪ್ರದೇಶಾಭಿವೃದ್ಧಿ ಮಂಡಳಿಗೆ ₹1,500 ಕೋಟಿ ಅನುದಾನ ಮೀಸಲಿಡಲಾಗುತ್ನೀತೆ ಡಲಾಗುತ್ತೆ

– ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ₹3,000 ಕೋಟಿ ಅನುದಾನ ಮೀಸಲಿಡಲಾಗುತ್ತೆ

– ಮಲೆನಾಡು, ಕರಾವಳಿ ಭಾಗದಲ್ಲಿ ರಸ್ತೆ ಸಂಪರ್ಕವಿಲ್ಲದಕಡೆ ಕಾಲು ಸಂಕ ನಿರ್ಮಿಸೋಕೆ ₹100 ಕೋಟಿ ವೆಚ್ಚದ ಗ್ರಾಮಬಂಧು ಸೇತುವೆ ಯೋಜನೆ ಪ್ರಾರಂಭವಾಗಲಿದೆ

– ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಸೌಲಭ್ಯ ಕಲ್ಪಿಸಲು ₹900 ಕೋಟಿ ಅನುದಾನ ಮೀಸಲಿಡಲಾಗಿದೆ

– ₹100 ಕೋಟಿಗಿಂತ ಹೆಚ್ಚು ಮೊತ್ತದ ಯೋಜನೆಗಳ ಮೌಲ್ಯಮಾಪನ ಕಡ್ಡಾಯ ಮಾಡಲಾಗಿದೆ

 

ಸಾರಿಗೆ ಕ್ಷೇತ್ರಕ್ಕೆ ಏನು..?

– ರಾಯಚೂರು ನಗರದಲ್ಲಿ ಸುಗಮ ಸಂಚಾರಕ್ಕಾಗಿ ರಿಂಗ್ ರಸ್ತೆ ನಿರ್ಮಾಣವಾಗಲಿದೆ

– ಸಂಚಾರ ವ್ಯವಸ್ಥೆಯ ಆಧುನೀಕರಣಕ್ಕೆ ಪ್ರಾಯೋಗಿಕವಾಗಿ ₹18 ಕೋಟಿ ಅನುದಾನ

– ಕೇಂದ್ರದ ಜೊತೆ 50:50 ವೆಚ್ಚದಲ್ಲಿ 1,173 ಕಿಲೋ ಮೀಟರ್ ಉದ್ದದ ರೈಲ್ವೆ ಮಾರ್ಗ. 7 ಹೊಸ ರೈಲ್ವೆ ಯೋಜನೆಗಳ ಆರಂಭ. ಇದಕ್ಕೆ ರಾಜ್ಯದಿಂದ ₹3,991 ಕೋಟಿ ಅನುದಾನ

– ದಿವಂಗತ ಸುರೇಶ್ ಅಂಗಡಿ ಆಸೆಯಂತೆ ಧಾರವಾಡ-ಕಿತ್ತೂರು-ಬೆಳಗಾವಿ ನಡುವೆ ₹927 ಕೋಟಿ ವೆಚ್ಚದಲ್ಲಿ 73 ಕಿಲೋ ಮೀಟರ್​ ಉದ್ದದ ಹೊಸ ರೈಲು ಮಾರ್ಗ

– ಹಾಸನ ವಿಮಾನ ನಿಲ್ದಾಣ ಕಾಮಗಾರಿ ₹175 ಕೋಟಿ ವೆಚ್ಚದಲ್ಲಿ ಆರಂಭ

– ರಾಜ್ಯದಲ್ಲಿ ಹೊಸದಾಗಿ 52 ಬಸ್ ನಿಲ್ದಾಣಗಳ ಸ್ಥಾಪನೆ

ಕೈಗಾರಿಕೆ & ಇಂಧನ ಕ್ಷೇತ್ರಕ್ಕೆ ಏನು..?

– ಪ್ಲಾಸ್ಟಿಕ್ ಮತ್ತು ಪೆಟ್ರೋಕೆಮಿಕಲ್ ಕೈಗಾರಿಕೆ ಅಭಿವೃದ್ಧಿಗೆ ಮಂಗಳೂರಿನ ಗಂಜಿಮಠದಲ್ಲಿ ಕೇಂದ್ರದ ಸಹಯೋಗದಲ್ಲಿ ₹66 ಕೋಟಿ ವೆಚ್ಚದ ಪ್ಲಾಸ್ಟಿಕ್ ಪಾರ್ಕ್ ಅಭಿವೃದ್ಧಿ

– ಕೈಮಗ್ಗ ನೇಕಾರರಿಗೆ 2,000 ರೂಗಳ ಆರ್ಥಿಕ ನೆರವು ನೀಡುವ ನೇಕಾರ್ ಸಮ್ಮಾನ್ ಯೋಜನೆ ಮುಂದುವರಿಕೆ

– ಬಾಗಲಕೋಟೆಯ ಬಾದಾಮಿ ತಾಲೂಕಿನ ಗುಳೇದಗುಡ್ಡದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಜವಳಿ ಪಾರ್ಕ್​​

– ಎಲೆಕ್ಟ್ರಿಕ್​ ವಾಹನ ಬಳಕೆ ಉತ್ತೇಜಿಸಲು ಖಾಸಗಿ ಸಹಭಾಗಿತ್ವದಲ್ಲಿ 1,000 ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ

– ನಿರಂತರ ವಿದ್ಯುತ್ ಪೂರೈಕೆಗಾಗಿ ₹4,000 ಕೋಟಿ ವೆಚ್ಚದಲ್ಲಿ ಪಂಪ್ಡ್​​ ಹೈಡ್ರೋ ಸ್ಟೋರೇಜ್ ಪ್ಲಾಂಟ್ ಸ್ಥಾಪನೆ

ಬೆಂಗಳೂರಿಗೆ ಏನೇನು..?

– ಬೆಂಗಳೂರು ನಗರ ಅಭಿವೃದ್ಧಿಗೆ ಒಟ್ಟು ₹7,795 ಕೋಟಿ ಮೀಸಲು

– ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ 234 ಕೆರೆಗಳಿಗೆ ನೀರು ತುಂಬಿಸಲು ₹500 ಕೋಟಿ ಮೊತ್ತದ ಯೋಜನೆ

– ಬೆಂಗಳೂರಿನ ಓಕಳೀಪುರಂನಲ್ಲಿ ರೇಷ್ಮೆ ಭವನ ಸ್ಥಾಪನೆ

– ಬೆಂಗಳೂರು ಉತ್ತರ ಭಾಗದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ

– 45 ಲಕ್ಷ ರೂಪಾಯಿವರೆಗಿನ ಫ್ಲ್ಯಾಟ್‌ಗಳನ್ನ ಖರೀದಿಸುವವರಿಗೆ ಮುದ್ರಾಂಕ ಶುಲ್ಕ ಕಡಿತ

– ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ₹20 ಕೋಟಿ ವೆಚ್ಚದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ 50 ಹಾಸಿಗೆ ಸಾಮರ್ಥ್ಯದ ಉಪಕೇಂದ್ರ

 

ಮಹಿಳೆಯರಿಗೆ ಏನು..?

– ಬೆಂಗಳೂರಿನಲ್ಲಿ ನಿರ್ಭಯಾ ಯೋಜನೆಯಲ್ಲಿ ನಗರಾದ್ಯಂತ 7,500 ಸಿಸಿ ಕ್ಯಾಮರಾಗಳ ಅಳವಡಿಕೆ

– ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ರಿಯಾಯಿತಿ ದರದ ಬಸ್ ಪಾಸ್

– ಆಸ್ಪತ್ರೆ, ವೈದ್ಯಕೀಯ, ಸೇವಾ ವಲಯದಲ್ಲಿರೋ ಮಹಿಳೆಯರಿಗೆ ಶೇ.4ರಷ್ಟು ಬಡ್ಡಿದರದಲ್ಲಿ 2 ಕೋಟಿ ರೂಪಾಯಿವರೆಗೆ ಸಾಲ

– ಹಪ್ಪಳ, ಉಪ್ಪಿನಕಾಯಿ, ಮಸಾಲೆ ಪದಾರ್ಥ ಸೇರಿದಂತೆ ಸಣ್ಣ ಉದ್ಯಮಗಳಲ್ಲಿ ತೊಡಗಿಸಿಕೊಂಡ ಮಹಿಳೆಯರಿಗೆ ಮಾರುಕಟ್ಟೆ ನೆರವು

 

ಸಂಸ್ಕೃತಿ, ಪರಂಪರೆ ಕ್ಷೇತ್ರಕ್ಕೆ ಏನು..?

– ಅಯೋಧ್ಯೆ ರಾಮಮಂದಿರಕ್ಕೆ ಹೋಗುವ ಕನ್ನಡಿಗರು ಉಳಿದುಕೊಳ್ಳಲು ಯಾತ್ರಿ ನಿವಾಸ ನಿರ್ಮಾಣಕ್ಕೆ ₹10 ಕೋಟಿ ಮೀಸಲು

– ಕಿತ್ತೂರಿನ ಕೋಟೆ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟಾರೆ ₹50 ಕೋಟಿ ಅನುದಾನ

– ಬಸವಣ್ಣನವರ ಜನ್ಮಸ್ಥಳ ಇಂಗಳೇಶ್ವರ ಗ್ರಾಮಾಭಿವೃದ್ಧಿಗೆ ₹5 ಕೋಟಿ ಅನುದಾನ

– ಮಂಡ್ಯದ ಆದಿಚುಂಚನಗಿರಿ ಕ್ಷೇತ್ರದಲ್ಲಿ ಆದಿಚುಂಚನಗಿರಿನಾಥ ಪಾರಂಪರಿಕ ಕೇಂದ್ರ ಸ್ಥಾಪನೆಗೆ ₹10 ಕೋಟಿ ಮೀಸಲು

– ಎಸ್​.ಎಲ್ ಭೈರಪ್ಪನವರ ಪರ್ವ ನಾಟಕದ ಪ್ರದರ್ಶನಕ್ಕೆ ₹1 ಕೋಟಿ ಮೀಸಲು

– ಮೈಸೂರಿನ ಕಬಿನಿ ಅಣೆಕಟ್ಟಿನ ಕೆಳಭಾಗದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ನಿರ್ಮಾಣ

ಇನ್ನು ಸಿಎಂ ಯಡಿಯೂರಪ್ಪ ಬಜೆಟ್ ಮಂಡಿಸುವಾಗ ಕಾಂಗ್ರೆಸ್​ನವರು ಸಭಾತ್ಯಾಗ ಮಾಡಿ ಹೊರ ನಡೆದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ, ಮುಂದಿನ ಚುನಾವಣೆಯಲ್ಲಿ ನಾವು 130ರಿಂದ 135 ಸೀಟು ಗೆಲ್ತೀವಿ. ಸಿದ್ದರಾಮಯ್ಯರನ್ನ ವಿಪಕ್ಷ ಸ್ಥಾನದಲ್ಲೇ ಕೂರಿಸ್ತೀವಿ. ಇಲ್ಲ ಅಂದ್ರೆ ನನ್ನನ್ನ ಯಡಿಯೂರಪ್ಪ ಅಂತ ಕರೀಲೇ ಬೇಡಿ ಅಂತ ಹೇಳಿದ್ರು. ಇನ್ನು ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್​ ಅನ್ನ ಟೊಳ್ಳು ಬಜೆಟ್ ಅಂತ ಕರೆದಿದ್ದಾರೆ.

-masthmagaa.com

Contact Us for Advertisement

Leave a Reply