ವಿಧಾನಮಂಡಲ ಅಧಿವೇಶನ ಪ್ರಾರಂಭ, 16ಕ್ಕೆ ಬಜೆಟ್‌ ಮಂಡನೆ!

masthmagaa.com:

ರಾಜ್ಯದಲ್ಲಿ ಸೋಮವಾರ ವಿಧಾನಮಂಡಲದ ಬಜೆಟ್ ಅಧಿವೇಶನ ಶುರುವಾಗಿದೆ. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಈ ಭಾಷಣದಲ್ಲಿ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನ ರಾಜ್ಯಪಾಲರು ಹೊಗಳಿದ್ದಾರೆ. ಇಡೀ ದೇಶಕ್ಕೆ ಈ ಗ್ಯಾರಂಟಿ ಯೋಜನೆಗಳು ಮಾದರಿ ಆಗಿವೆ. ಈ ಯೋಜನೆಗಳು ರಾಜ್ಯದ ಬಡವರಿಗೆ ತೃಪ್ತಿ ನೀಡಿವೆ. ಈ ಸ್ಕೀಮ್‌ಗಳಿಂದ 2 ಕೋಟಿ ಜನರು ಬಡತನ ರೇಖೆಯಿಂದ ಹೊರಗೆ ಬಂದಿದ್ದಾರೆ ಅಂತ ಗೆಹ್ಲೋಟ್‌ ಹೇಳಿದ್ದಾರೆ. ಇನ್ನು 16ನೇ ತಾರೀಖು ಸಿಎಂ ಸಿದ್ಧರಾಮಯ್ಯ ರಾಜ್ಯ ಬಜೆಟ್‌ ಮಂಡನೆ ಮಾಡಲಿದ್ದಾರೆ.

-masthmagaa.com

Contact Us for Advertisement

Leave a Reply