ನೈತಿಕ ಪೊಲೀಸ್ ಗಿರಿ: ಸಿಎಂ ಬೊಮ್ಮಾಯಿ ಹೇಳಿಕೆಯಿಂದ ವಿವಾದ

masthmagaa.com:

ನೈತಿಕ ಪೊಲೀಸ್ ಗಿರಿ ಅಥವಾ ಮತೀಯ ಗೂಂಡಾಗಿರಿಯ ಪ್ರಕರಣಗಳ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ನಿಡಿರೋ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ‘ಸಮಾಜದಲ್ಲಿ ಜನರ ಭಾವನೆಗಳಿಗೆ ಧಕ್ಕೆ ಬರದಂತೆ ನಡೆದುಕೊಳ್ಳಬೇಕಾಗುತ್ತದೆ. ಪರಸ್ಪರರ ಭಾವನೆಗಳಿಗೆ ಧಕ್ಕೆ ಉಂಟಾದಾಗ ಸಹಜವಾಗಿ ಕ್ರಿಯೆ-ಪ್ರತಿಕ್ರಿಯೆಗಳು ಇದ್ದೇ ಇರುತ್ತವೆ’ ಅಂತ ಮಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ ಕೊಟ್ಟಿದ್ದರು. ಇದಕ್ಕೆ ಕಾಂಗ್ರೆಸ್ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ. ರಾಜ್ಯದ ಮುಖ್ಯಮಂತ್ರಿಯೇ ನೈತಿಕ ಪೊಲೀಸ್ಗಿರಿ ಬೆಂಬಲಿಸುವಂತೆ ಹೇಳಿಕೆ ಕೊಟ್ಟರೆ ಇಂಥ ಘಟನೆಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗೋ ಅಪಾಯ ಇದೆ ಅಂತ ಕಾಂಗ್ರೆಸ್ ಹೇಳಿದೆ.

-masthmagaa.com

Contact Us for Advertisement

Leave a Reply