ನಿಮ್ಮ ‘ದೊಲಾಂಡ್ ಟ್ರಂಪ್’ ಭಾರತದ ಬಗ್ಗೆ ಕೀಳಾಗಿ ಮಾತಾಡ್ತಿದ್ದಾರೆ..!

masthmagaa.com:

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣಾ ಪ್ರಚಾರ ಅಬ್ಬರಿಂದಲೇ ನಡೆಯುತ್ತಿದೆ. ಜೋ ಬೈಡೆನ್‌ ಮತ್ತು ಡೊನಾಲ್ಡ್​ ಟ್ರಂಪ್‌ ಮಾತಿನ ಬ್ಯಾಟ್‌ನಿಂದಲೇ ಫೋರ್,‌ ಸಿಕ್ಸ್‌ಗಳ ಮಳೆಯನ್ನೇ ಸುರಿಸುತ್ತಿದ್ದಾರೆ. ಆದ್ರೆ ಟ್ರಂಪ್‌ ಮಾತ್ರ ತಮ್ಮ ಕುರ್ಚಿಯನ್ನ ಗಟ್ಟಿಗೊಳಿಸಲು ತಮ್ಮ ಭಾಷಣದಲ್ಲಿ ಭಾರತದ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಅದ್ರಲ್ಲೂ ವಾಯು ಮಾಲಿನ್ಯ ವಿಚಾರದಲ್ಲಿ ಭಾರತವನ್ನು ಪದೇಪದೆ ಟೀಕಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್​‌ ಟ್ವಿಟ್ಟರ್​ನಲ್ಲಿ ಟ್ರಂಪ್ ಅವರ ಈ ನಡೆಯನ್ನು ಕಟುವಾಗಿ ಟೀಕಿಸಿ ಅಂತ ಪ್ರಧಾನಿ ಮೋದಿಗೆ ಆಗ್ರಹಿಸಿದೆ.

‘ನರೆಂದ್ರ ಮೋದಿಯವರೇ ನೀವು ಡೊನಾಲ್ಡ್‌ ಟ್ರಂಪ್‌ ಪರವಾಗಿ ಅಬ್‌ ಕಿ ಬಾರ್‌ ಟ್ರಂಪ್‌ ಸರ್ಕಾರ್​ ಅಂತ ಘೋಷಿಸಿ ಬಂದಿದ್ದಿರಿ, ಗುಜರಾತಿಗೆ ಕರೆಸಿ ಗೋಡೆ ಕಟ್ಟಿಸಿ ‘ನಮಸ್ತೆ’ ಎಂದಿದ್ದೀರಿ. ಈಗ ಭಾರತದ ಬಗ್ಗೆ ಕೀಳಾಗಿ ಮಾತಾಡಿದ್ದಾರೆ ನಿಮ್ಮ ಸ್ನೇಹಿತ ‘ದೊಲಾಂಡ್‌ ಟ್ರಂಪ್’.‌ (ಈ ಹಿಂದೆ ಮೋದಿ ಭಾಷಣ ಮಾಡುವಾಗ ಡೊನಾಲ್ಡ್‌ ಟ್ರಂಪ್‌ ಹೆಸರನ್ನ ತಪ್ಪಾಗಿ ಉಚ್ಛರಿಸಿದ್ದನ್ನ ಕಾಂಗ್ರೆಸ್‌ ಲೇವಡಿ ಮಾಡಿದೆ) ತಾವೀಗ ಮೌನವೇಕೆ..? ಕಟುವಾಗಿ ಖಂಡಿಸಿ ನಿಮ್ಮ ದೇಶಭಕ್ತಿ ಸಾಬೀತುಪಡಿಸಿ’ ಅಂತ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.

-masthmagaa.com

Contact Us for Advertisement

Leave a Reply