masthmagaa.com:
ಕಳೆದ ವರ್ಷ ಮತ್ತು ಈ ವರ್ಷದ ಆರಂಭದಲ್ಲಿ ಕೊರೋನಾ ಹಾವಳಿ, ಲಾಕ್ಡೌನ್ ಅಂತೆಲ್ಲಾ ವಾಹನ ಸಂಚಾರ ಬಂದ್ ಆಗಿತ್ತು. ಇದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆಯಿಂದ ಬರ್ತಿದ್ದ ಆದಾಯ ಕೂಡ ಖೋತಾ ಆಗಿತ್ತು. ಆದ್ರೀಗ ಕೊರೋನಾ ಕಮ್ಮಿಯಾಗಿ, ಎಲ್ಲಾ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ಇದರಿಂದ ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ರಾಜ್ಯ ಸರ್ಕಾರಕ್ಕೆ ಬಂಪರ್ ಆದಾಯ ಬಂದಿದೆ. ಈ ವರ್ಷದ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ಪೆಟ್ರೋಲ್-ಡೀಸೆಲ್ ಮೇಲಿನ ಟ್ಯಾಕ್ಸ್ನಿಂದ 9,720 ಕೋಟಿ ರೂಪಾಯಿ ಆದಾಯ ಬಂದಿದೆ. ಇದು ಕಳೆದ ವರ್ಷ ಇದೇ ಅವಧಿಯಲ್ಲಿ ಬಂದ ಆದಾಯಕ್ಕಿಂತ 48 ಪರ್ಸೆಂಟ್ ಹೆಚ್ಚು. ಪೆಟ್ರೋಲ್ ಮತ್ತು ಡೀಸೆಲ್ ರೇಟ್ ಈಗಿರುವಷ್ಟೇ ಇದ್ರೂ ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರಕ್ಕೆ 20,000 ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ ಅಂತ ಕಮರ್ಷಿಯಲ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ನ ಅಧಿಕಾರಿಯೊಬ್ಬರು ಹೇಳಿದ್ದಾರೆ ಅಂತ ವರದಿಯಾಗಿದೆ. ಅಂದ್ಹಾಗೆ ಪೆಟ್ರೋಲ್ ಮೇಲೆ ರಾಜ್ಯ ಸರ್ಕಾರ 35 ಪರ್ಸೆಂಟ್ ಮತ್ತು ಡೀಸೆಲ್ ಮೆಲೆ 24 ಪರ್ಸೆಂಟ್ ಟ್ಯಾಕ್ಸ್ ಹಾಕುತ್ತೆ. ಸದ್ಯ ರಾಜ್ಯದಲ್ಲಿ ಒಂದು ಲೀಟರ್ ಪೆಟ್ರೋಲ್ ರೇಟ್ 110ರಿಂದ 112 ರೂಪಾಯಿ ಇದೆ. ಡೀಸೆಲ್ 100 ರೂಪಾಯಿ ಇದೆ. ಇದರರ್ಥ ಒಂದು ಲೀಟರ್ ಪೆಟ್ರೋಲ್ನಿಂದ ರಾಜ್ಯ ಸರ್ಕಾರದ ಭೊಕ್ಕಸಕ್ಕೆ 28 ರೂಪಾಯಿ ಹೋಗುತ್ತೆ, ಅದೇ ರೀತಿ ಒಂದು ಲೀಟರ್ ಡೀಸೆಲ್ನಿಂದ 21 ರೂಪಾಯಿ ಹೋಗುತ್ತೆ. ಕೇಂದ್ರ ಸರ್ಕಾರಕ್ಕೂ ಆಲ್ಮೋಸ್ಟ್ ಇಷ್ಟೇ, ಇದಕ್ಕಿಂತ ಜಾಸ್ತಿ ಹೋಗುತ್ತೆ. ಇತ್ತೀಚೆಗಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನ ಕಮ್ಮಿ ಮಾಡೋ ಬಗ್ಗೆ ಸುಳಿವು ಕೊಟ್ಟಿದ್ದರು. ಉಪ ಚುನಾವಣೆ ಬಳಿಕ, ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನ ಪರಾಮರ್ಶಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳೋದಾಗಿ ಹೇಳಿದ್ದರು.
-masthmagaa.com
Contact Us for Advertisement