ಬರಪೀಡಿತ ರೈತರಿಗೆ 628 ಕೋಟಿ ರೂ ಪರಿಹಾರ! ರಾಜ್ಯ ಸರ್ಕಾರ ಘೋಷಣೆ!

masthmagaa.com:

ರಾಜ್ಯ ವಿಧಾನಮಂಡಲ ಅಧಿವೇಶನಕ್ಕೂ ಮೊದಲು ಇದೀಗ ಬರಪೀಡಿತ ರೈತರಿಗೆ ರಾಜ್ಯ ಸರ್ಕಾರ ಪರಿಹಾರ ಬಿಡುಗಡೆ ಮಾಡಿದೆ. ಇದಕ್ಕಾಗಿ ಒಟ್ಟು 628 ಕೋಟಿ ರೂಪಾಯಿಗಳನ್ನ ಬಿಡುಗಡೆ ಮಾಡಿರೋದಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಫೆಬ್ರುವರಿ 11 ರಂದು ಹೇಳಿದ್ದಾರೆ. ಈ ಮೂಲಕ ಮೊದಲ ಕಂತಿನಲ್ಲಿ ಪ್ರತಿ ಸಂತ್ರಸ್ತ ರೈತರ ಬ್ಯಾಂಕ್‌ ಅಕೌಂಟ್‌ಗೆ 2 ಸಾವಿರ ರೂಪಾಯಿ ಡೆಪಾಸಿಟ್‌ ಮಾಡಲಾಗಿದೆ. ಸದ್ಯ 33 ಲಕ್ಷ ಸಂತ್ರಸ್ತ ರೈತರಿಗೆ ಭಾಗಶಃ ಪರಿಹಾರ ಬಿಡುಗಡೆ ಮಾಡಲಾಗಿದೆ. ಇನ್ನು 1.6 ಲಕ್ಷ ರೈತರ ಬ್ಯಾಂಕ್‌ ಅಕೌಂಟ್‌ಗಳಿಗೆ ಹಣ ಕಳಿಸೋ ತಯಾರಿಗಳು ನಡೀತಿವೆ. ಇದಾದ ನಂತ್ರ ಈ ಉಳಿದ ರೈತರಿಗೂ ಪರಿಹಾರ ಬಿಡುಗಡೆ ಮಾಡಲಾಗುತ್ತೆ ಅಂತ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply