ರಾಜ್ಯ ಸರ್ಕಾರದ ಬಳಿ ನಿಜವಾಗಿಯೂ ದುಡ್ಡಿಲ್ಲವಾ..?

ಹಾಯ್ ಫ್ರೆಂಡ್ಸ್..
ಯಡಿಯೂರಪ್ಪ ಹೇಳಿಕೆ ಮತ್ತು ಕುಮಾರಸ್ವಾಮಿ ಉತ್ತರವನ್ನು ನೋಡ್ತಾ ಇದ್ರೆ ಜನಕ್ಕೆ ರಾಜ್ಯ ಸರ್ಕಾರದ ಖಜಾನೆ ಪೂರ್ತಿ ಖಾಲಿ ಆಗಿ ಹೋಗಿದೆಯಾ..? ಅನ್ನೋ ಪ್ರಶ್ನೆ ಮೂಡುತ್ತೆ. ಸಿಂಪಲ್ಲಾಗಿ ನಾವು ಉತ್ತರ ಹೇಳುತ್ತೇವೆ ಕೇಳಿ. ಸರ್ಕಾರದ ಖಜಾನೆ ಖಾಲಿ ಎಲ್ಲಾ ಆಗೋದಿಲ್ಲ. ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಹೇಳಿದ್ದು ಸರಿ. ಹಾಗಂತ ಯಡಿಯೂರಪ್ಪ ಹೇಳಿದ್ದು ಸುಳ್ಳು ಅಂತ ಅಲ್ಲ. ಇಬ್ಬರು ಹೇಳಿದ್ದರಲ್ಲೂ ಅರ್ಧಸತ್ಯ ಇದೆ ಅರ್ಧ ಸುಳ್ಳು ಇದೆ. ಬಹುಶಃ ಅವರಿಗೆ ಸರಿಯಾಗಿ ಅರ್ಥ ಆಗೋ ಥರ ಹೇಳಲು ಗೊತ್ತಾಗಿಲ್ಲ ಅನಿಸುತ್ತೆ. ಅದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ನೋಡಿ.

ಫ್ರೆಂಡ್ಸ್ ಈಗ ನೋಡಿ… ಕರ್ನಾಟಕ ರಾಜ್ಯ ಸರ್ಕಾರದ ಬಜೆಟ್ ಎರಡು ಲಕ್ಷ ಕೋಟಿಗೂ ಹೆಚ್ಚು. ಇಷ್ಟು ದೊಡ್ಡ ಪ್ರಮಾಣದಲ್ಲಿ ದುಡ್ಡಿದ್ದರೂ ಸರ್ಕಾರಕ್ಕೆ ಅದರದ್ದೇ ರಿಪೀಟ್ ಆದ ಖರ್ಚುಗಳು ಇದ್ದೇ ಇರುತ್ತವೆ. ಆಯಾ ಇಲಾಖೆಗಳಿಗೆ ಇಂತಿಷ್ಟು ಅಂತ ಫಿಕ್ಸ್ ಆಗಿರುತ್ತದೆ. ಸೋ ಎಡಿಯೂರಪ್ಪ ಹೇಳಿದ ಹಾಗೆ ಖಜಾನೆ ಖಾಲಿಯಾಗಿದೆ ಅಂದರೆ ಸರ್ಕಾರದ ಅಕೌಂಟ್ ಪೂರ್ತಿ ಜೀರೋ ಆಗಿದೆ ಅಂತ ಅರ್ಥ ಅಲ್ಲ. ಅಥವಾ ಕುಮಾರಸ್ವಾಮಿ ಹೇಳಿದ ಹಾಗೆ ಬೇಜಾನ್ ದುಡ್ಡು ತುಂಬಿತುಳುಕುತ್ತಿದೆ ಅಂತಾನೂ ಅಲ್ಲ. ಸತ್ಯ ಇಷ್ಟೇ. ಸರ್ಕಾರದ ಖಜಾನೆಯಲ್ಲಿ ಸಾವಿರಾರು ಕೋಟಿ ದುಡ್ಡು ಯಾವಾಗಲೂ ಇದ್ದೇ ಇರುತ್ತದೆ. ಆದರೆ ಅವೆಲ್ಲಾ ಈಗಾಗಲೇ ಇಂತಿಂಥ ಕೆಲಸಕ್ಕೆ ಅಂತ ಹಂಚಿಕೆ ಆಗಿಹೋಗಿರುತ್ತದೆ. ಒಂದಷ್ಟು ದುಡ್ಡು ರಸ್ತೆಗೆ, ಶಾಲೆ-ಕಾಲೇಜಿಗೆ, ಆಸ್ಪತ್ರೆಗೆ, ಜನರಿಗೆ ರೇಷನ್ ಕೊಡಕ್ಕೆ ಇತರ ಬೇರೆ ಬೇರೆ ಉದ್ದೇಶಕ್ಕೆ ಇಡೀ ವರ್ಷಕ್ಕೆ ಎಷ್ಟು ಖರ್ಚಾಗುತ್ತೆ ಅಂತ ಮೊದಲೇ ಫಿಕ್ಸ್ ಮಾಡಿರುತ್ತಾರೆ. ಬರುವ ಆದಾಯ ಎಷ್ಟು, ಅದರಲ್ಲಿ ಯಾವ ಕೆಲಸಕ್ಕೆ ಎಷ್ಟು ಖರ್ಚು ಮಾಡಬೇಕು ಅಂತ ಮೊದಲೇ ನಿರ್ಧಾರ ಆಗಿರುತ್ತದೆ. ಇವೆಲ್ಲವೂ ಲೆಕ್ಕದ ಪ್ರಕಾರ ನಡೆಯುತ್ತಿರುತ್ತದೆ. ಆದರೆ ಪ್ರವಾಹ ಮತ್ತಿತರ ನೈಸರ್ಗಿಕ ವಿಕೋಪಗಳು ಆದಾಗ ಲೆಕ್ಕ ಎಕ್ಕುಟ್ಟಿ ಹೋಗುತ್ತದೆ. ಯಾಕಂದ್ರೆ ಅನಿರೀಕ್ಷಿತವಾಗಿ ದೊಡ್ಡ ನೈಸರ್ಗಿಕ ವಿಕೋಪ ಆದಾಗ ಪರಿಹಾರ ಕಾರ್ಯಕ್ಕೆ ಅಂತಹ ಸಾವಿರಾರು ಕೋಟಿ ಖರ್ಚು ಮಾಡಬೇಕಾಗುತ್ತದೆ. ಆಗ ಸಮಸ್ಯೆ ಎದುರಾಗುತ್ತದೆ. ಬೇರೆ ಕೆಲಸಕ್ಕೆ ಇಟ್ಟ ದುಡ್ಡನ್ನು ತೆಗೆದರೆ ಅಲ್ಲಿ ಅರ್ಧಕ್ಕೆ ಕೆಲಸ ನಿಂತು ಹೋಗುತ್ತದೆ. ತೆಗೆಯದೆ ಇದ್ದರೆ ಪರಿಹಾರ ಕಾರ್ಯಾಚರಣೆ ಆಗೋದಿಲ್ಲ. ಆಗ ರಾಜ್ಯಸರ್ಕಾರಗಳಿಗೆ ಉಸಿರುಕಟ್ಟಿಸುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಅದೇ ಕಾರಣಕ್ಕೆ ಜನಸಾಮಾನ್ಯರು, ಸಂಘ-ಸಂಸ್ಥೆಗಳು ನೆರವು ನೀಡಿ ಅಂತಹ ಸರ್ಕಾರ ಕೇಳುತ್ತದೆ. ಇದು ವಾಸ್ತವ ವಿಚಾರ.

ಈ ಸಮಸ್ಯೆಗೆ ಪರಿಹಾರ ಇದೆ!
ಹೌದು ಫ್ರೆಂಡ್ಸ್, ಸರ್ಕಾರಗಳು ಸ್ವಲ್ಪ ಮುಂದಾಲೋಚನೆಯಿಂದ ಕೆಲಸ ಮಾಡಿದರೆ ಈ ಸಮಸ್ಯೆಗೆ ಪರಿಹಾರ ಇದೆ. ಒಂದು ದೊಡ್ಡ ಪರಿಹಾರ ನಿಧಿಯನ್ನು ಸ್ಥಾಪಿಸಬೇಕು. ಅದರಲ್ಲಿ ಪ್ರತಿವರ್ಷವೂ ಇಂತಿಷ್ಟು ದುಡ್ಡನ್ನು ಸರ್ಕಾರ ತೆಗೆದು ಇಡುತ್ತಲೇ ಹೋಗಬೇಕು. ನೈಸರ್ಗಿಕ ವಿಕೋಪಗಳು ದೊಡ್ಡ ಪ್ರಮಾಣದಲ್ಲಿ ಆದಾಗ ಮಾತ್ರವೇ ಅದನ್ನು ಬಳಸಬೇಕು. ಈಗಾಗಲೇ ಇಂತಹ ನಿಧಿಗಳು ಇದ್ದರೂ ಅದರಲ್ಲಿ ಜಾಸ್ತಿ ದುಡ್ಡಿಲ್ಲ. ದುಡ್ಡು ಸಂಗ್ರಹಮಾಡಿ ನೀಡುವ ಗೋಜಿಗೆ ಸರ್ಕಾರಗಳು ಹೋಗಿಲ್ಲ. ಇವರಿಗೆ ಖರ್ಚು ಮಾಡಕ್ಕೆನೇ ದುಡ್ಡು ಸಾಕಾಗಲ್ಲ. ಹೀಗಾಗಿ ಇನ್ನು ಮುಂದಾದರೂ ಮನಸ್ಥಿತಿ ಬದಲಾಯಿಸಿಕೊಂಡು ಇಂತಹ ಸಮಸ್ಯೆಗಳನ್ನು ಎದುರಿಸೋಕೆ ಅಂತಾನೆ ಒಂದು ದೊಡ್ಡ ನಿಧಿಯನ್ನ ಪ್ರತಿ ರಾಜ್ಯ ಸರ್ಕಾರಗಳು ಸ್ಥಾಪಿಸಬೇಕು. ಪ್ರತಿವರ್ಷವೂ ಒಂದು ಒಳ್ಳೆಯ ಅಮೌಂಟ್ ಅನ್ನ ಅದರಲ್ಲಿ ಇಡುತ್ತಾ ಹೋಗಬೇಕು. ಆಗ ಪ್ರವಾಹ, ಭೂಕಂಪ, ಬರಗಾಲ ಇತ್ಯಾದಿ ಉಂಟಾದಾಗ ಜನರಿಗೆ ಪರಿಹಾರ ಒದಗಿಸಲು ಸುಲಭವಾಗುತ್ತದೆ.

Contact Us for Advertisement

Leave a Reply