86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಿಟೆಲ್‌ ಕುಟುಂಬಕ್ಕೆ ಆಮಂತ್ರಣ!

masthmagaa.com:

ಹಾವೇರಿಯಲ್ಲಿ ನಡೆಯಲಿರುವ 86ನೇ ʻಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನʼಕ್ಕೆ ಕನ್ನಡ-ಇಂಗ್ಲೀಷ್‌ ನಿಘಂಟು ರಚನೆಕಾರ ಫರ್ಡಿನಾಂಡ್‌ ಕಿಟೆಲ್‌ ಅವರ ಕುಟುಂಬವನ್ನ ಕನ್ನಡ ಸಾಹಿತ್ಯ ಪರಿಷತ್ ಆಹ್ವಾನಿಸಿದೆ. ಜರ್ಮನಿಯ ಮ್ಯೂರಿಚ್‌ನಲ್ಲಿರೊ ಕಿಟೆಲ್‌ ಅವರ ಮರಿಮೊಮ್ಮಗಳು ಅಲ್ಮತ್ ಮೆಯರ್ ಹಾಗೂ ಅವರ ಮಗ ಯವೆಸ್ ಪ್ಯಾಟ್ರಿಕ್ ಮೆಯರ್ ಮತ್ತು ಸಂಬಂಧಿ ಜಾನ್ ಫೆಡ್ರಿಕ್ ಅವರು ಧಾರವಾಡಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಜನವರಿ 6 ರಿಂದ 8ರವರೆಗೆ ನಡೆಯಲಿರುವ ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನಿಸಿದ್ದಾರೆ. ಕನ್ನಡ ಸಾಹಿತ್ಯದಿಂದ ಸ್ಪೂರ್ತಿ ಪಡೆದಿದ್ದ ಫರ್ಡಿನಾಂಡ್‌ ಕಿಟೆಲ್‌, ಕನ್ನಡ ಭಾಷೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಮಂಗಳೂರು, ಮಡಿಕೇರಿ ಹಾಗೂ ಧಾರವಾಡದಲ್ಲಿ ಕನ್ನಡಕ್ಕಾಗಿ ಕೆಲಸ ಮಾಡಿದ್ದಾರೆ. 1894ರಲ್ಲಿ ಇವರು ರಚಿಸಿದ ಕನ್ನಡ-ಇಂಗ್ಲೀಷ್‌ ನಿಘಂಟು ಸುಮಾರು 70 ಸಾವಿರ ಪದಗಳನ್ನ ಒಳಗೊಂಡಿತ್ತು. ಇನ್ನು ಕಿಟೆಲ್‌ ಕುಟುಂಬ ಮಾತ್ರವಲ್ದೇ, 1843ರಲ್ಲಿ ಮೊದಲ ಕನ್ನಡ ಪತ್ರಿಕೆ ʻಮಂಗಳೂರು ಸಮಾಚಾರʼವನ್ನ ಪ್ರಾರಂಭಿಸಿದ ಹರ್ಮನ್‌ ಮೋಗ್ಲಿಂಗ್‌ ಅವ್ರ ಕುಟುಂಬವನ್ನೂ ಆಹ್ವಾನಿಸೋಕೆ ಕಸಾಪ ನಿರ್ಧರಿಸಿದೆ.

-masthmagaa.com

Contact Us for Advertisement

Leave a Reply